‘ಕನ್ನಡಿಗ’ನಿಗೆ ಬುದ್ಧಿ ಹೇಳುವಂತೆ ಪೊಲೀಸರ ಮೊರೆ ಹೋದ ನಟಿ ಅನಿತಾ ಭಟ್!

Promotion

ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ನಟಿ ಅನಿತಾ ಭಟ್ ಸಾಮಾಜಿಕ ಜಾಲತಾಣ ಟ್ವಿಟ್ಟರ್’ನಲ್ಲಿ ಅವಾಚ್ಯ  ಪದಗಳನ್ನು ಬಳಸಿ ಕಾಮೆಂಟ್, ರೀ ಟ್ವೀಟ್ ಮಾಡುತ್ತಿರುವ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಅನಿತಾ ಭಟ್, ತಮ್ಮ ಚಿತ್ರಗಳು ಹಾಗೂ ವೈಯಕ್ತಿಕ ಬದುಕಿನ ಫೋಟೋ, ಮಾಹಿತಿಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

ಈ ನಡುವೆ ಟ್ವಿಟ್ಟರ್ ನಲ್ಲಿ ಕನ್ನಡಿಗ (@viswa3286)ಎಂಬ ಖಾತೆ ಹೊಂದಿರುವ ವ್ಯಕ್ತಿಯೊಬ್ಬ ಅವಾಚ್ಯ ಶಬ್ಧಗಳನ್ನು ಬಳಸಿ ಟ್ವೀಟ್ , ಕಾಮೆಂಟ್ ಮಾಡುತ್ತಿದ್ದಾನೆ ಎಂದು ಯಲಹಂಕದ ಸಿಇಎನ್ ಪೊಲೀಸ್ ಠಾಣೆಗೆ ದೂರು ದಾಖಲಿದ್ದಾರೆ.

ಈ ವ್ಯಕ್ತಿಗೆ ಸೂಕ್ತ ತಿಳಿವಳಿಕೆ ಹೇಳುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.