ರೆಬಲ್ ಸ್ಟಾರ್ ಮತ್ತೆ ತೆರೆ ಮೇಲೆ ಮಿಂಚಲು ಬರುತ್ತಿದ್ದಾರೆ !

Promotion

ಬೆಂಗಳೂರು, ನವೆಂಬರ್ 02, 2019 (www.justkannada.in): ರೆಬೆಲ್ ಸ್ಟಾರ್ ಅಂಬರೀಶ್ ನಟನೆಯ ಸೂಪರ್ ಹಿಟ್ ಸಿನಿಮಾ ‘ಅಂತ’ ರೀ-ರಿಲೀಸ್ ತಡವಾಗಿತ್ತು.

ಇದೀಗ ಈ ಚಿತ್ರವು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಯ ಮೇಲೆ ಇದೇ ತಿಂಗಳ 8 ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡುತ್ತಿದೆ.

ಆಧುನಿಕ ಟಚ್ ನೀಡಿರುವ ‘ಅಂತ’ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ಕಲರ್ ಫುಲ್ ಮೂಡಿ ಬಂದಿದೆ ಹಾಗೆಯೇ ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಭರವಸೆ ಮೂಡಿಸಿದೆ.

1981 ರಲ್ಲಿ ತೆರೆ ಕಂಡಿದ್ದ ಈ ಚಿತ್ರವು ಆಗಿನ ಸಮಯದಲ್ಲಿ ದೊಡ್ಡ ಹಿಟ್ ಆಗಿತ್ತು.