ಪ್ರತಿಷ್ಠಿತ 12 ENBA ಪ್ರಶಸ್ತಿ ಮುಡಿಗೇರಿಸಿಕೊಂಡ ‘ನ್ಯೂಸ್‌ ಫಸ್ಟ್‌’ ಸುದ್ದಿ ವಾಹಿನಿ.

ನವದೆಹಲಿ, ಏಪ್ರಿಲ್,1,2024 (www.justkannada.in):  ಈ ಬಾರಿಯೂ ಕನ್ನಡಿಗರ ನೆಚ್ಚಿನ ನ್ಯೂಸ್‌ ಫಸ್ಟ್‌ ಸುದ್ದಿ ವಾಹಿನಿ ಪ್ರತಿಷ್ಠಿತ 12 ENBA ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನ್ಯೂಸ್‌ಫಸ್ಟ್‌ ವಾಹಿನಿಗೆ ಪ್ರಶಸ್ತಿಗಳ ಮಳೆಯೇ ಹರಿದು ಬಂದಿದೆ.

ಚಿನ್ನ

  1. ಚೈತ್ರಾ ಕೇಸ್​​ ವಿಸ್ತೃತ ವರದಿ
  2. ನಾನು ಮುಖ್ಯಮಂತ್ರಿ
  3. ಬೆಂಗಳೂರು ಫಸ್ಟ್
  4. ಬೆಸ್ಟ್ ಆ್ಯಂಕರ್ : ವಿದ್ಯಾಶ್ರೀ
  5. ‘ಇಸ್ರೇಲ್​​ ವಾರ್​​ ಇಂಪ್ಯಾಕ್ಟ್ ಆನ್​​​​​ ಕನ್ನಡಿಗಾಸ್’
  6. ಮತದಾನ ಜಾಗೃತಿ ವಿಭಾಗದಲ್ಲಿ ‘ಡ್ರಾಮಾಕ್ರಸಿ’ ವಿಶೇಷ ಕಾರ್ಯಕ್ರಮಕ್ಕೆ ಪ್ರಶಸ್ತಿ

ಬೆಳ್ಳಿ :

  1. ಏನ್​​ ಸಮಾಚಾರ
  2. ಇಂಡಿಯಾ ಫಸ್ಟ್
  3. ಸ್ಪೆಷಲ್​​ ರಿಪೋರ್ಟ್

ಕಂಚು :

  1. ಬೆಸ್ಟ್ ಆ್ಯಂಕರ್​​​ : ರಕ್ಷತ್​ ಶೆಟ್ಟಿ
  2. ಮೈಕ್ರೋಸೈಟ್ : NewsFirstLive
  3. ಸ್ಯಾಂಟ್ರೋ ರವಿ ಕೇಸ್

ಬರೋಬ್ಬರಿ ಐದು ‘ಸ್ವರ್ಣ’ ಪ್ರಶಸ್ತಿ

ಬೆಸ್ಟ್ ಕವರೇಜ್ ವಿಭಾಗದಲ್ಲಿ ಕುಂದಾಪುರ ಮೂಲದ ಚೈತ್ರಾ ಕೇಸ್​​ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ನ್ಯೂಸ್ ​​ಫಸ್ಟ್​​ ನ್ಯೂಸ್​ ಕೋ-ಆರ್ಡಿನೇಟರ್ ಮೋಹನ್ ​​​ಕುಮಾರ್.ಕೆ.ಪಿ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಬೆಸ್ಟ್ ಅರ್ಲಿ ಪ್ರೈಂ ಶೋ ವಿಭಾಗದಲ್ಲಿ ನ್ಯೂಸ್ ​​ಫಸ್ಟ್ ​​​ನ ವಿಶೇಷ ಕಾರ್ಯಕ್ರಮ ‘ನಾನು ಮುಖ್ಯಮಂತ್ರಿ’ ಕಾರ್ಯಕ್ರಮಕ್ಕೆ ಪ್ರಶಸ್ತಿ ಬಂದಿದೆ. ಬೆಸ್ಟ್ ಲೇಟ್ ಪ್ರೈಂ ಟೈಂ ಶೋ ವಿಭಾಗದಲ್ಲಿ ಪ್ರತಿದಿನ ರಾತ್ರಿ 10 ಗಂಟೆಗೆ ಪ್ರಸಾರವಾಗುವ ‘ಬೆಂಗಳೂರು ಫಸ್ಟ್’​ ಕಾರ್ಯಕ್ರಮಕ್ಕೆ ಚಿನ್ನದ ಪ್ರಶಸ್ತಿ ಬಂದಿದ್ದು, ಬಿಸಿನೆಸ್ ಹೆಡ್ ಎಸ್​​. ದಿವಾಕರ್ ಪ್ರಶಸ್ತಿ ಸ್ವೀಕರಿಸಿದರು. ಇನ್ನು, ಬೆಸ್ಟ್ ಆ್ಯಂಕರ್ ವಿಭಾಗದಲ್ಲಿ ವಿದ್ಯಾಶ್ರೀ ಉಜಿರೆಗೆ ಚಿನ್ನದ ಪ್ರಶಸ್ತಿ ಸಂದಿದೆ. ವಿದ್ಯಾಶ್ರೀ ಪರವಾಗಿ ನ್ಯೂಸ್ ​​ಫಸ್ಟ್​​ ನ ಕ್ರಿಯೇಟಿವ್ ಹೆಡ್ ಹೆಚ್​​ಪಿ ಸಿದ್ದೇಶ್​​​ಕುಮಾರ್ ಪ್ರಶಸ್ತಿ ಸ್ವೀಕರಿಸಿದರು. ಹಾಗೆಯೇ ‘ಇಸ್ರೇಲ್​​ ವಾರ್​​ ಇಂಪ್ಯಾಕ್ಟ್ ಆನ್​​​​​ ಕನ್ನಡಿಗಾಸ್’ ವಿಸ್ತೃತ ವರದಿಗೆ ಚಿನ್ನದ ಪ್ರಶಸ್ತಿ ಬಂದಿದ್ದು, ಅಸೋಸಿಯೇಟ್ ಎಡಿಟರ್ ಅನಂತ್​ ಸಾಯಿ ಪ್ರಶಸ್ತಿ ಸ್ವೀಕರಿಸಿದರು.

ಪ್ರತಿಷ್ಠಿತ ENBA ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡ ನ್ಯೂಸ್ ಫಸ್ಟ್ ತಂಡಕ್ಕೆ ಸಂಸ್ಥೆಯ ಸಿಇಓ ಹಾಗೂ ಎಂಡಿ ರವಿಕುಮಾರ್ ಮತ್ತು ಪ್ರಧಾನ ಸಂಪಾದಕರಾದ ಎಸ್.ಎಚ್.ಮಾರುತಿ ಅವರು ಅಭಿನಂದಿಸಿದ್ದಾರೆ. ಸಂಸ್ಥೆಯ ಪ್ರತಿಯೊಬ್ಬರ  ಶ್ರಮ, ಪರಿಶ್ರಮದ ಪರಿಣಾಮವೇ ನ್ಯೂಸ್ ಫಸ್ಟ್ ಸಂಸ್ಥೆಗೆ ಈ ವರ್ಷವೂ 12 ಪ್ರಶಸ್ತಿ ಲಭಿಸಲು ಕಾರಣವಾಗಿದೆ. ಮತ್ತಷ್ಟು ಕಾರ್ಯಕ್ರಮಗಳು , ನೇರ, ನಿಷ್ಠೂರ, ನೈಜ, ಜನಪರ, ಮಾನವೀಯ ಮೌಲ್ಯಗಳ ಸುದ್ದಿಗಳನ್ನ ಉಣಬಡಿಸುವ ಮೂಲಕ ಕರುನಾಡಿನ ಜನತೆಗೆ ಮತ್ತಷ್ಟು ಹತ್ತಿರವಾಗುತ್ತೇವೆ. ನಿಮ್ಮ ಹಾರೈಕೆ ಸದಾ ಹೀಗೆ ಇರಲಿ. ಈ ಹಂತಕ್ಕೆ ಜತೆಯಾದ ರಾಜ್ಯದ ಜನತೆಗೆ, ನ್ಯೂಸ್ ಫಸ್ಟ್ ವೀಕ್ಷಕರಿಗೆ ನಮನಗಳು ಎಂದು ಸಿಇಓ ರವಿಕುಮಾರ್ ಹಾಗು ಸಂಪಾದಕ ಎಸ್.ಎಚ್.ಮಾರುತಿ ತಿಳಿಸಿದ್ದಾರೆ.

Key words: News First,  ENBA, awards