ಈ ಬಾರಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮಕ್ಕೆ ಬ್ರೇಕ್….

ಬೆಳಗಾವಿ, ಡಿಸೆಂಬರ್,5,2020(www.justkannada.in):  ಕೊರೋನಾ ಹಿನ್ನೆಲೆ ಈ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಸಂಭ್ರಮಾಚರಣೆ ಇರುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.logo-justkannada-mysore

ಬೆಳಗಾವಿಯಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್, ಈ ಬಾರಿ  ಬೆಂಗಳೂರಿನಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದೆ. ಇದು ಇಡೀ ರಾಜ್ಯಕ್ಕೆ ಅನ್ವಯಿಸುತ್ತದೆ. ಇದಕ್ಕೆ ಸಿಎಂ ಬಿಎಸ್ ವೈ ಸಮ್ಮತಿಸಿದ್ದಾರೆ. ಬ್ರಿಗೇಡ್ ಮತ್ತು ಎಂ.ಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆ ಮಾಡುವ ಆಗಿಲ್ಲ. ಹೋಟೆಲ್ ಗಳಲ್ಲಿ, ಬಾರ್ ಪಬ್ ಗಳಲ್ಲಿ ಸರಳವಾಗಿ ಪಾರ್ಟಿ ಮಾಡಬಹುದು. ಆದರೇ ಶೇ. 50 ರಷ್ಟು ಸಾಮರ್ಥ್ಯ ಮೀರುವಂತಿಲ್ಲ.   ಈ ಕುರಿತು ಪ್ರತ್ಯೇಕ ಮಾರ್ಗಸೂಚಿ ಬಿಡಗಡೆ ಮಾಡಲಾಗುತ್ತದೆ.  ಈ ಕುರಿತು ಶೀಘ್ರವೇ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದು ತಿಳಿಸಿದರು.new-years-eve-celebration-break-bangalore-minister-r-ashok

ಕಾಂಗ್ರೆಸ್ ನಿಂದ ದ್ರೋಹವಾಗಿದೆ. ಕಾಂಗ್ರೆಸ್ ಜತೆ ಕೈಜೋಡಿಸಿ ಹಾಳಾದೆ ಎಂಬ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್.ಅಶೋಕ್, ಹೆಚ್.ಡಿಕೆಗೆ ಈಗ ಜ್ಞಾನೋದಯವಾಗಿದೆ.  ಸಮ್ಮಿಶ್ರ ಸರ್ಕಾರ ಪತನವಾಗಲು ಬಿಜೆಪಿ ಕಾರಣ ಎಂದು ಪದೇ ಪದೇ ಆರೋಪ ಮಾಡುತ್ತಿದ್ದರು. ಈಗ ಮೈತ್ರಿ ಸರ್ಕಾರ ಪತನಕ್ಕೆ ಸಿದ್ಧರಾಮಯ್ಯ ಕಾರಣ ಅಂತ ಅವರೇ ಹೇಳಿದ್ದಾರೆ ಎಂದರು.

Key words: New Year’s- Eve -celebration –break- Bangalore -Minister R. Ashok