‘’ಹೊಸ ವರ್ಷ’’ಕ್ಕೆ ಮನೆ ಕದ ತಟ್ಟಿದ ಪೊಲೀಸರು, ಮಾಲೀಕರಿಗೆ ಆಶ್ಚರ್ಯ…!

ಮೈಸೂರು,ಜನವರಿ,01,2020(www.justkannada.in) : ಹೊಸ ವರ್ಷಕ್ಕೆ ಮನೆ ಕದ ತಟ್ಟಿದ ಪೊಲೀಸರು ಕೊಟ್ಟದ್ದು ಏನ್ ಗೊತ್ತಾ..?  ಬಾಗಿಲು ತೆರೆದ ಮನೆ ಮಾಲೀಕರಿಗೆ ಆಶ್ಚರ್ಯದ ಜೊತೆಗೆ ಸಂತೋಷವೋ ಸಂತೋಷ..!jk-logo-justkannada-mysoreಕಳವು ಮಾಲುಗಳನ್ನು ವಾರಸುದಾರರ ಮನೆ ಬಾಗಿಲಿಗೆ ತೆರಳಿ ಹಸ್ತಾಂತರಿಸುವ ಮೂಲಕ ಮೈಸೂರು ಪೊಲೀಸರು ಹೊಸ ಪ್ರಯತ್ನಕ್ಕೆ ನಾಂದಿ ಹಾಡಿದ್ದಾರೆ.New year,policemen,who,patrolled,house,Surprise,owner ...!

ಡಿಸಿಪಿ ಗೀತಾ ಪ್ರಸನ್ನ ಹಾಗೂ ನರಸಿಂಹರಾಜ  ಎಸಿಪಿ ಶಿವಶಂಕರ್  ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯದಲ್ಲಿ , ಲಷ್ಕರ್ ಠಾಣೆಯ ಇನ್ಸ್ ಪೆಕ್ಟರ್ ಸುರೇಶ್ ಕುಮಾರ್, ಮಂಡಿ ಠಾಣೆ ಇನ್ಸ್ ಪೆಕ್ಟರ್  ನಾರಾಯಣಸ್ವಾಮಿ, ಪಿಎಸ್ಐ ಧನಲಕ್ಷ್ಮಿ, ಶಬರೀಶ್  ಹಾಗೂ  ಪೊಲೀಸ್ ಸಿಬ್ಬಂದಿ ವರ್ಗದವರಾದ ಮಂಜುನಾಥ್, ಲೋಕೇಶ್, ಚಿನ್ನಪ್ಪ, ಪ್ರದೀಪ್, ರವಿಗೌಡ ಭಾಗವಹಿಸಿದ್ದರು. ಜತೆಗೆ ವಶಪಡಿಸಿಕೊಂಡ ಚಿನ್ನಾಭರಣಗಳನ್ನು ವಾರಸುದಾರರಿಗೆ ಖುದ್ದು ಒಪ್ಪಿಸಿದರು.

ಮನೆ ಮಾಲೀಕರು ಈ ಘಟನೆಯಿಂದ ಭಾವುಕರಾಗಿದ್ದು, ಕಣ್ಣಂಚಲ್ಲಿ ನೀರು ತುಂಬಿಕೊಂಡು ಚಿನ್ನಾಭರಣ ಪಡೆದುಕೊಂಡಿದ್ದಾರೆ. ಚಿನ್ನಾಭರಣಗಳನ್ನು ನೀಡಿದ ಡಿಸಿಪಿ ಗೀತಾ ಪ್ರಸನ್ನರಿಗೆ ಅರಿಶಿನ ಕುಂಕುಮ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಮೂರು ದಿನಗಳಲ್ಲಿ ಪ್ರಕರಣ ಬಯಲು

ಕೇವಲ ಮೂರು ದಿನಗಳಲ್ಲಿ ಪ್ರಕರಣವೊಂದನ್ನು ಬೇಧಿಸಿ ಮಂಡಿ, ಲಷ್ಕರ್, ಕೃಷ್ಣರಾಜ, ನರಸಿಂಹರಾಜ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಕಾರ್ಯಾಚರಣೆಯಲ್ಲಿ ಒಟ್ಟು 22 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೩ ಲಕ್ಷ ನಗದು ವಶ ಪಡಿಸಿಕೊಂಡಿದ್ದಾರೆ.New year-policemen-who-patrolled-house-Surprise-owner ...!

ಕಳುವಾದ ಮಾಲುಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಒಪ್ಪಿಸಿದ್ದು ಇದೇ ಮೊದಲಾಗಿದ್ದು, ಇಡೀ ರಾಜ್ಯಕ್ಕೆ ಮೈಸೂರು ಪೊಲೀಸರು. ಮಾದರಿಯಾಗಿದ್ದಾರೆ.

key words : New year-policemen-who-patrolled-house-
Surprise-owner …!