ಹೊಸ ವರ್ಷ ಪ್ರಾರಂಭ ಹಿನ್ನೆಲೆ: ಈ ಬಾರಿ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಮುಕ್ತ ಪ್ರವೇಶ.

ಮೈಸೂರು,ಡಿಸೆಂಬರ್,31,2021(www.justkannada.in):  ಹೊಸ ವರ್ಷ ಪ್ರಾರಂಭ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೆಲ ಪ್ರವಾಸಿ ತಾಣಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಮೈಸೂರಿನ ಚಾಮುಂಡಿಬೆಟ್ಟಕ್ಕೆ  ಭಕ್ತರಿಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ನೂತನ ವರ್ಷ ಪ್ರಾರಂಭ ಹಿನ್ನಲೆ. ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಯಾವುದೇ ಅಡ್ಡಿ ಇಲ್ಲ ಈ ಬಾರಿ ದೇವಿಯ ದರ್ಶನಕ್ಕೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.  ಹೊಸ ವರ್ಷದಲ್ಲಿ ಬೆಟ್ಟಕ್ಕೆ ಭಕ್ತರ ದಂಡು ಹರಿದು ಬರುವ ಸಾಧ್ಯತೆ ಇದೆ,  ಈ ಬಾರಿ 300 ರೂ ಶುಲ್ಕದ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿದೆ. ಎರಡು‌ ದಿನಗಳ ಕಾಲ ವಿಶೇಷ ದರ್ಶನದ ವ್ಯವಸ್ಥೆ. ಇರಲಿದೆ.

100 ಮತ್ತು 30 ರೂ ಗಳ ದರ್ಶನದ ಜೊತೆ ಈಗ 300 ರೂ ಗಳ ವಿಶೇಷ ದರ್ಶನ ವ್ಯವಸ್ಥೆಯನ್ನು ಮಾಡಲಾಗಿದ್ದು, ವಿಶೇಷ ದರ್ಶನದ ಜೊತೆ ಭಕ್ತಾದಿಗಳಿಗೆ ಲಡ್ಡು ಪ್ರಸಾದ ವ್ಯವಸ್ಥೆ ಕೂಡ ಇರಲಿದೆ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ  ಮಾಹಿತಿ ನೀಡಿದ್ದಾರೆ.

Key words: New Year –  open -access – darshana-mysore-chamundi hills

ENGLISH SUMMARY…

New Year: No restrictions to visit Chamundi temple
Mysuru, December 31, 2021 (www.justkannada.in): Restrictions have been imposed at several tourist places across the state in the wake of the new year. However, entry to the Chamundeshwari temple atop the Chamundi hills, in Mysuru is thrown open on the new year day.
Devotees can visit and have the darshan of Goddess Chamundeshwari on the occasion of new year’s day. The temple authorities have expected a huge crowd on new year’s day. Arrangements have also been made to provide a special darshan for Rs. 300 per ticket, which will be available for two days.
The Rs.300 ticket is introduced, along with the Rs. 100 and Rs. 30 tickets for new year’s day. Devotees who buy Rs. 300 ticket will get laddus, according to the temple authorities.
Keywords: New Year/ Chamundi temple/ no restrictions for devotees