ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯ: ವಿದ್ಯುತ್ ಶಾಕ್ ಹೊಡೆದು ಕಂಬದ ಮೇಲಿಂದ ಬಿದ್ದ ಕೂಲಿ ಕಾರ್ಮಿಕ…

ಮೈಸೂರು,ಸೆ,18,2019(www.justkannada.in): ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೂಲಿ ಕಾರ್ಮಿಕನಿಗೆ ವಿದ್ಯುತ್ ಶಾಕ್ ಹೊಡೆದು ಆತ ಕಂಬದ ಮೇಲಿದ್ದ ಬಿದ್ದಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಕ್ಯಾತನಹಳ್ಳಿಯಲ್ಲಿ ಈ ಘಟನೆ‌ ನಡೆದಿದೆ. ಶಿಂಡೇನಹಳ್ಳಿ ಅಮವಾಸೇಗೌಡ ಪುತ್ರ ದಿನೇಶ್ (20) ಗಾಯಗೊಂಡ ಯುವಕ. ವಿದ್ಯುತ್ ಕಡಿತವಾಗಿದೆ ಎಂದು ಲೈನ್ ಮೆನ್ ದಿನೇಶ್ ನನ್ನ  ವಿದ್ಯುತ್ ಕಂಬಕ್ಕೆ ಹತ್ತಿಸಿದ್ದು, ಇದೇ ವೇಳೆ ವಿದ್ಯುತ್ ತಗುಲಿ ಯುವಕ ದಿನೇಶ್ ಅಸ್ವಸ್ಥನಾಗಿದ್ದಾನೆ.

ಗಂಭೀರವಾಗಿ ಗಾಯಗೊಂಡ ಯುವಕ ದಿನೇಶ್ ನನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಷ್ಟೆಲ್ಲಾ ಘಟನೆ ನಡೆದರೂ ಈವರೆಗೂ ಕೆಇಬಿ ಅಧಿಕಾರಿಗಳು ಬಂದು ಯುವಕನ ಆರೋಗ್ಯ ಸ್ಥಿತಿ ವಿಚಾರಿಸಿಲ್ಲ. ಹೀಗಾಗಿ ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ಸಂಬಂಧಿಕರು ಪ್ರತಿಭಟನೆ ನಡೆಸಿದರು.

Key words: Neglect – KEB -Labor -fell -electric shock-mysore