ಮೊದಲ ಪ್ರಯತ್ನದಲ್ಲಿ ನೀಟ್‌ (NEET) ಭೇದಿಸಿದ ಸಹೋದರಿಯರು.

ನೀಟ್‌ ತೇರ್ಗಡೆ ಹೊಂದಿದೆ ಸಹೋದರಿಯರು. ಚಿತ್ರ ಕೃಪೆ : ಎಎನ್‌ ಐ

 

NEW DELHI : ನಿಮ್ಮ ಮೇಲೆ ನಿಮಗೆ ನಂಬಿಕೆ ಇದ್ದರೆ, ನೀವು ಬಯಸಿದ ಕನಸನ್ನು ನನಸಾಗಿಸಬಹುದು.

ಜಮ್ಮು ಮತ್ತು ಕಾಶ್ಮೀರದ ಈ ಮೂವರು ಸೋದರಿಯರು, ತಮ್ಮ ಮೊದಲ ಪ್ರಯತ್ನದಲ್ಲಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯನ್ನು (NEET) ಭೇದಿಸಿದ್ದು ಇದಕ್ಕೆ ಸಾಕ್ಷಿ.

ಶ್ರೀನಗರ ನೌಶೆರಾದ, ತುಬಾ ಬಶೀರ್, ರುತ್ಬಾ ಬಶೀರ್ ಮತ್ತು ಅರ್ಬಿಶ್  ಮೊದಲ ಪ್ರಯತ್ನದಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ನೀಟ್‌ ತೇರ್ಗಡೆ.

ಮಧ್ಯಮ ವರ್ಗಕ್ಕೆ ಸೇರಿದ ಈ ಸಹೋದರಿಯರು, ಶ್ರೀನಗರದ ಇಸ್ಲಾಮಿಯಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ.

ಕಣಿವೆಯಲ್ಲಿ ದಶಕಗಳ ದಂಗೆಯ ಹೊರತಾಗಿಯೂ, ಈ ಸಹೋದರಿಯರು ತಮ್ಮ ಶಿಕ್ಷಣವನ್ನು ಎಂದಿಗೂ ನಿಲ್ಲಿಸಲಿಲ್ಲ. ಜತೆಗೆ ಪೋಷಕರ ಸರಿಯಾದ ತರಬೇತಿ ಮತ್ತು ಬೆಂಬಲದ ಸಹಾಯದಿಂದ, NEET ಪರೀಕ್ಷೆಯನ್ನು ಯಶಸ್ವಿಯಾಗಿ ತೇರ್ಗಡೆ ಮಾಡಿದರು.

ತನ್ನ ಕುಟುಂಬದಲ್ಲಿ ವೈದ್ಯರಿಲ್ಲ ಎಂದು ಅರ್ಬಿಶ್, ತಾನೇ ಸ್ವಯಂ ಡಾಕ್ಟರ್‌ ಆಗಲು ನಿರ್ಧರಿಸಿದಳು. NEET ಪರೀಕ್ಷೆ  ಭೇದಿಸಲು ತಾನು ಅನುಸರಿಸಿದ ಸೂತ್ರ ಹಂಚಿಕೊಂಡ ಆಕೆ, ಈ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ತಾನು ಶ್ರದ್ಧೆಯಿಂದ ತಯಾರಿ ನಡೆಸಿದೆ. ಇದು ತನ್ನ ಮೊದಲ ಮತ್ತು ಅಂತಿಮ ಪ್ರಯತ್ನವೆಂದು ಪರಿಗಣಿಸಿದೆ.

“ನಾನು ತುಂಬಾ ಸಂತೋಷವನ್ನು ಅನುಭವಿಸುತ್ತಿದ್ದೇನೆ. ನಮ್ಮ ಕುಟುಂಬದಲ್ಲಿ ವೈದ್ಯರಿರಲಿಲ್ಲ, ವೈದ್ಯಳಾಗುವುದು ನನ್ನ ಸ್ವಂತ ನಿರ್ಧಾರವಾಗಿತ್ತು. ನಮ್ಮ ಪೋಷಕರು ಮೊದಲಿನಿಂದಲೂ ನಮ್ಮನ್ನು ಸಂಪೂರ್ಣವಾಗಿ ಬೆಂಬಲಿಸಿದರು. ತಯಾರಿ ನಡೆಸುವಾಗ, ಇದು ಮೊದಲ ಮತ್ತು ಕೊನೆಯ ಪ್ರಯತ್ನ ಎಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿತ್ತು.

ಮೂವರೂ ಸೋದರಿಯರು ಒಟ್ಟಿಗೆ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದರಿಂದ ತುಬಾ ಬಶೀರ್ ಹರ್ಷಿತರಾಗಿದ್ದಾರೆ.

ನೀಟ್‌ ತೇರ್ಗಡೆ ಹೊಂದಿದೆ ಸಹೋದರಿಯರು. ಚಿತ್ರ ಕೃಪೆ : ಎಎನ್‌ ಐ

“ನಾವು ಮೂವರೂ ಒಟ್ಟಿಗೆ NEET ತೇರ್ಗಡೆಗೊಳಿಸಿದ್ದೇವೆ. ನಾವು ಒಟ್ಟಿಗೆ ಶಾಲೆಗೆ ಹೋಗಿದ್ದೆವು ಮತ್ತು ನಾವು MBBS ಪೂರ್ಣಗೊಳಿಸಿ ವೈದ್ಯರಾಗುತ್ತೇವೆ. ನಾವು ಕಷ್ಟಪಟ್ಟಿದ್ದರಿಂದ ಉತ್ತಮ ಫಲಿತಾಂಶ ಬಂದಿದೆ. ಇದರಿಂದ ನನಗೆ ತುಂಬಾ ಸಂತೋಷವಾಗಿದೆ ಅನ್ನುತ್ತಾರೆ ತುಬಾ ಬಶೀರ್.‌

ರುತಾಬಾ ಬಶೀರ್ ಪ್ರಕಾರ, ಪ್ರಥಮ ಪಿಯುಸಿಯಲ್ಲೇ NEET ಪರೀಕ್ಷೆಗೆ ತಯಾರಿ ಆರಂಭಿಸಿ ಮೊದಲ ಪ್ರಯತ್ನದಲ್ಲೇ ಅದನ್ನು ಭೇದಿಸಲು ವ್ಯಾಪಕವಾಗಿ ಅಧ್ಯಯನ ಮಾಡಿದರು. ತಮ್ಮ ಯಶಸ್ಸನ್ನು ಬಾಲ್ಯದಿಂದಲೂ ಬೆಂಬಲಿಸಿದ ಅವರ ಹೆತ್ತವರಿಗೆ ಸಲ್ಲಿಸಿದರು.

ಇತ್ತೀಚಿನ ವರ್ಷಗಳಲ್ಲಿ, ಕಣಿವೆಯ ಯುವಕರು ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಪ್ರದರ್ಶನಗಳನ್ನು ಪ್ರದರ್ಶಿಸುತ್ತಿದ್ದಾರೆ.

ಕೃಪೆ : ಎ.ಎನ್‌.ಐ

key words: neet ̲exams ̲ passed ̲ first ̲ attempt ̲ jammu ̲ kashmir ̲ sisters