ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಯನತಾರಾ- ವಿಘ್ನೇಶ್ ಶಿವನ್

ಬೆಂಗಳೂರು, ಜೂನ್ 09, 2022 (www.justkannada.in): ಲೇಡಿ ಸೂಪರ್ ಸ್ಟಾರ್ ನಯನ ತಾರಾ ಸಪ್ತಪದಿ ತುಳಿದಿದ್ದಾರೆ.  ವಿಘ್ನೇಶ್ ಶಿವನ್ ಜತೆ ವೈವಾವಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವಿಘ್ನೇಶ್ ಶಿವನ್ ತಮ್ಮ ಮತ್ತು ನಯನತಾರಾ ಅವರ ವಿವಾಹದ ಮೊದಲ ಚಿತ್ರವನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕಂಡು ಅಭಿಮಾನಿಗಳು ಮದುವೆಯ ಶುಭಾಶಯ ಕೋರಿದ್ದಾರೆ.

ಅಂದಹಾಗೆ ನಯನತಾರಾ ಹಸಿರು ಬಣ್ಣದ ಆಭರಣಗಳೊಂದಿಗೆ ಕೆಂಪು ಉಡುಪಿನಲ್ಲಿ ಮಿಂಚಿದ್ದಾರೆ. ವಿಘ್ನೇಶ್ ಕ್ರೀಮ್ ಕುರ್ತಾ ಮತ್ತು ಸಾಂಪ್ರದಾಯಿಕ ಚಿನ್ನದ ಅಂಚಿನ ವೆಷ್ಟಿಯೊಂದಿಗೆ ಕಾಣಿಸಿಕೊಂಡಿದ್ದಾರೆ.

ವಿಘ್ನೇಶ್ ಹಂಚಿಕೊಂಡ ಪೋಟೋದಲ್ಲಿ ಅವ್ರ ನಯನತಾರಾ ಹಣೆಗೆ ಮುತ್ತಿಡುತ್ತಿದ್ದು, ದಂಪತಿಗಳು ಕೈಗಳನ್ನ ಹಿಡಿದ್ದಾರೆ. ಪೋಟೋ ಹಂಚಿಕೊಂಡಿರುವ ವಿಘ್ನೇಶ್, ‘ನಯನ ಮತ್ತು ನಾನು ಈಗ ಒಂದು.. ಎಂದು ಬರೆದುಕೊಂಡಿದ್ದಾರೆ.