ಜೆಡಿಎಸ್ ಗಾಗಿ ಕಾಂಗ್ರೆಸ್ ತ್ಯಾಗ ಮಾಡಿದೆ: ಮುದ್ದು ಹನುಮೇಗೌಡರಿಗೆ ಆದ ಅನ್ಯಾಯ ಇನ್ನೂ ಸರಿಪಡಿಸಲು ಆಗಿಲ್ಲ- ಕೃಷ್ಣಬೈರೇಗೌಡ

ಮೈಸೂರು,ಜೂನ್,9,2022(www.justkannada.in): ಲೋಕಸಭಾ ಚುನಾವಣೆ ವೇಳೆ ಹಾಲಿ ಸದಸ್ಯರಾಗಿದ್ದ ಮುದ್ದು ಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಟಿಕೆಟ್ ಕೊಟ್ಟಿದ್ದೇವೆ. ಜೆಡಿಎಸ್ ಗಾಗಿ ಕಾಂಗ್ರೆಸ್ ತ್ಯಾಗ ಮಾಡಿದೆ. ಬೆಂಬಲ ಕೊಡುವುದು ನಿಮ್ಮ ಧರ್ಮ ಎಂದು ಮಾಜಿ ಸಚಿವ ಕೃಷ್ಣಬೈರೇಗೌಡ ನುಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೃಷ್ಣಬೈರೇಗೌಡ, ಎಚ್.ಡಿ. ದೇವೇಗೌಡರು ಬೆಂಗಳೂರು ಉತ್ತರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಿತ್ತು. ಅವತ್ತು ಕೊನೆ ಕ್ಷಣದಲ್ಲಿ ದೇವೇಗೌಡರ ಮನಸ್ಸು ಬದಲಾಯಿಸಿ ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದರು. ಹಾಲಿ ಸದಸ್ಯರಾಗಿದ್ದ ಮುದ್ದು ಹನುಮೇಗೌಡರಿಗೆ ಟಿಕೆಟ್ ತಪ್ಪಿಸಿ ದೇವೇಗೌಡರಿಗೆ ಟಿಕೆಟ್ ಕೊಟ್ಟಿದ್ದೇವೆ. ಅವತ್ತು ಮುದ್ದು ಹನುಮೇಗೌಡರಿಗೆ ಆದ ಅನ್ಯಾಯವನ್ನು ನಮ್ಮ ಕೈಯಲ್ಲಿ ಇನ್ನೂ ಸರಿಪಡಿಸಲು ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನೇಕ‌ ಜೆಡಿಎಸ್ ಅಭ್ಯರ್ಥಿಗಳಿಗೆ ನಾವು ಸಹಾಯ ಮಾಡಿದ್ದೇವೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಅವರು ನಮ್ಮ ಬೆಂಬಲಕ್ಕೆ ನಿಲ್ಲುವುದು ಧರ್ಮ ಎಂದು ಕೊಂಡಿದ್ದೇನೆ. ಕಾಂಗ್ರೆಸ್ ಅನೇಕ ಸಂದರ್ಭದಲ್ಲಿ ಜೆಡಿಎಸ್ ಗಾಗಿ ತ್ಯಾಗ ಮಾಡಿದೆ. ಅದನ್ನು ಜೆಡಿಎಸ್ ನವರು ಬೇರೆ ರೀತಿ ವಿಶ್ಲೇಷಿಸುತ್ತಾರೆ. ನಾವು ಬೆಂಬಲ ಕೇಳಿದ್ದೇವೆ. ಕೊಡುವುದು ಬಿಡುವುದು ಅವರಿಗೆ ಸೇರಿದ್ದು ಎಂದರು.

Key words: Congress – JDS-support-rajyasabha-election-MLA- Krishna Biregauda