Tuesday, September 22, 2026

BDA Apartments

ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾ ಗಾಯಾಳು ಪಟ್ಟಿಗೆ ನವದೀಪ್ ಸೈನಿ ಸೇರ್ಪಡೆ! BDA JK_...
Home Front Page ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾ ಗಾಯಾಳು ಪಟ್ಟಿಗೆ ನವದೀಪ್ ಸೈನಿ ಸೇರ್ಪಡೆ!

ಟೆಸ್ಟ್ ಕ್ರಿಕೆಟ್: ಟೀಂ ಇಂಡಿಯಾ ಗಾಯಾಳು ಪಟ್ಟಿಗೆ ನವದೀಪ್ ಸೈನಿ ಸೇರ್ಪಡೆ!

ಸಿಡ್ನಿ, ಜನವರಿ 15, 2021 (www.justkannada.in): ಆಸಿಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಆಟಗಾರರ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ.

ನಾಲ್ಕನೇ ಟೆಸ್ಟ್ ಪಂದ್ಯದ ಬೌಲಿಂಗ್ ವೇಳೆ ನವದೀಪ್ ಸೈನಿ ಕೂಡ ಗಾಯಗೊಂಡಿದ್ದಾರೆ.

ನಾಲ್ಕನೇ ಟೆಸ್ಟ್ ನ ಮೊದಲ ದಿನದಾಟದಲ್ಲಿ ಬೌಲಿಂಗ್ ಮಾಡುತ್ತಿದ್ದಾಗಲೇ ತೊಡೆ ಸಂಧಿನ ನೋವು ಕಾಡಿದ ಕಾರಣ ನವದೀಪ್ ಸೈನಿ ಮೈದಾನವನ್ನು ತೊರೆದಿದ್ದಾರೆ.

ಪಂದ್ಯದ 36ನೇ ಓವರ್‍ನ 5ನೇ ಎಸೆತವನ್ನು ಸೈನಿ ಬೌಲಿಂಗ್ ಮಾಡುತ್ತಿದ್ದಾಗ ನೋವು ಕಾಣಿಸಿಕೊಂಡಿತ್ತು.
ಸೈನಿ ಗಬ್ಬಾ ಸ್ಟೇಡಿಯಂನಲ್ಲಿ ಮೊದಲ ದಿನದಾಟದಲ್ಲಿ ಕೇವಲ 7.5 ಓವರ್ ಬೌಲಿಂಗ್ ಮಾಡಿದ್ದು, ರೋಹಿತ್ ಶರ್ಮಾ ಓವರ್ ಪೂರ್ಣಗೊಳಿಸಿದರು.