ಸ್ವಾವಲಂಬಿ ಭಾರತ ಕಟ್ಟಲು ರಾಷ್ಟ್ರೀಯ ಶಿಕ್ಷಣ ನೀತಿ ಗಟ್ಟಿ ಅಡಿಪಾಯ- ಆರ್.ಎನ್. ರವಿ

ಮೈಸೂರು,ಜುಲೈ,27,2022(www.justkannada.in):  ರಾಷ್ಟ್ರೀಯ ಶಿಕ್ಷಣ ನೀತಿಯು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತದೆ ಎಂದು ತಮಿಳುನಾಡಿನ ರಾಜ್ಯಪಾಲ ಆರ್.ಎನ್.ರವಿ ತಿಳಿಸಿದ್ದಾರೆ.

ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಮೈಸೂರು ವಿವಿ ಬ್ರಿಟಿಷರ ಆಡಳಿತದ ಕಾಲದಲ್ಲೇ ಸ್ಥಾಪನೆಯಾದ ವಿವಿ. ಇದಕ್ಕೆ ಸಾಕಷ್ಟು ವರ್ಷಗಳ ಇತಿಹಾಸ ಇದೆ. ರಾಜರ ಕೊಡುಗೆ ಇದು. ವಸಹಾತುಶಾಹಿ ನಡುವೆಯೂ ಮೈಸೂರಿನ ರಾಜರು ಮೈಸೂರು ವಿವಿ ಸ್ಥಾಪನೆ ಮಾಡಿದರು. ಪರಿಣಾಮ ಲಕ್ಷಾಂತರ ಮಂದಿಗೆ ಈ ವಿವಿಯು ಜ್ಞಾನಾರ್ಜನೆ ಮಾಡುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ಭಾರತದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾದ ಸಂಗತಿ. ಎನ್‌ ಇಪಿ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಕೌಶಲ್ಯವನ್ನು ಬೆಳೆಸುವುದರಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಅಲ್ಲದೆ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುತ್ತದೆ. ಎನ್‌ ಇಪಿ ಕಲಿಕೆಯ ಚಿತ್ರಣವನ್ನೇ ಬದಲಾಯಿಸಲು ಶಿಕ್ಷಣವನ್ನು ಸಮಗ್ರವಾಗಿ ಸ್ವಾವಲಂಬಿ ಭಾರತ ಕಟ್ಟಲು ಗಟ್ಟಿ ಅಡಿಪಾಯ ಹಾಕಲು ಸಹಕಾರಿ. ಸಂಸ್ಕೃತ ಸೇರಿದಂತೆ ಸ್ಥಳೀಯ ಭಾಷೆಗಳಿಗೂ ಒತ್ತು ನೀಡಲಾಗಿದೆ ಎಂದು ಹೇಳಿದರು.

ಇಂದು ಭಾರತ ಶಿಕ್ಷಣ ಸಂಸ್ಥೆಗಳಿಂದ ಸಾಕಷ್ಟು ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ಆದರೆ, ಹೀಗೆ ಪದವಿ ಪಡೆದ ಎಷ್ಟೋ ಮಂದಿ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಪದವಿ ನೀಡುವುದಷ್ಟೇ ನಮ್ಮ ಕೆಲಸವಾಗಬಾರದು. ಮಕ್ಕಳಲ್ಲಿ ಕೌಶಲ್ಯ ಬೆಳೆಸಬೇಕು. ಉದ್ಯೋಗ ಸೃಷ್ಟಿಸುವ ವಾತಾವರಣ ನಿರ್ಮಾಣ ಮಾಡಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮ, ತರಗತಿ ವರ್ಗೀಕರಣ, ಆರಂಭದ ಕಲಿಕೆ, ಭಾಷೆ ಜೊತೆ ಕೌಶಲ್ಯ, ಉನ್ನತ ಶಿಕ್ಷಣ ಹಾಗೂ ಪರೀಕ್ಷೆ ಸರಳೀಕರಿಸುವ ಕೆಲಸವಾಗುತ್ತದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಮಾತನಾಡಿ, ಇಂದು ನಮ್ಮೆಲ್ಲರಿಗೂ ಸಂಭ್ರಮದ ದಿನ. ಕಾರಣ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ವಿವಿ ಸ್ಥಾಪಿಸಿ 106 ವರ್ಷಗಳು ಕಳೆದಿವೆ. ನಾಡಿನ ಸರ್ವತೋಮುಖ ಅಭಿವೃದ್ಧಿ ಹಾಗೂ ದೂರದೃಷ್ಟಿಯಿಂದ ಮಹಾರಾಜರು ಈ ವಿವಿಯನ್ನು ಸ್ಥಾಪನೆ ಮಾಡಿದರು. ಮಹಾತ್ಮಗಾಂಧಿ ಅವರು ನಾಲ್ವಡಿ ಅವರನ್ನು ರಾಜ ಋಷಿ ಎಂದು ಕರೆದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಇಟ್ಟ ಒಂದೊಂದು ಹೆಜ್ಜೆಯೂ ನಾಡಿನ ಪ್ರಗತಿಗೆ ಮಹತ್ವ ಮೈಲಿಗಲ್ಲಾಗಿದೆ. ಶಿಕ್ಷಣ, ಕ್ರೀಡೆ, ಸಂಸ್ಕೃತಿ, ಕೈಗಾರಿಕೆ, ಕೃಷಿ ಹೀಗೆ ಹತ್ತು ಹಲವು ಕ್ಷೇತ್ರಗಳಿಗೆ ತಮ್ಮದೆ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

1916 ಜುಲೈ 27ರಂದು ಮೈಸೂರು ವಿವಿ ಸ್ಥಾಪನೆಯಾಗುತ್ತದೆ. ಈ ಯೋಜನೆಯನ್ನು ಸಮರ್ಥವಾಗಿ ಅಂದಿನ ದಿವಾನರಾಗಿದ್ದ ವಿಶ್ವೇಶ್ವರಯ್ಯ ಅವರು ಅನುಷ್ಠಾನಕ್ಕೆ ತರುತ್ತಾರೆ. ಮದ್ರಾಸ್ ವಿವಿ ಒಪ್ಪಿದರೆ ಮಾತ್ರ ಮೈಸೂರು ವಿವಿ ಸ್ಥಾಪನೆಯಾಗುತ್ತದೆ ಎಂಬ ಪರಿಸ್ಥಿತಿ ಆಗ ನಿರ್ಮಾಣವಾಗಿತ್ತು. ಮದ್ರಾಸ್ ಸಿಂಡಿಕೇಟ್ ಸಭೆಯಲ್ಲಿ ಈ ವಿಷಯವನ್ನು ಇಟ್ಟಾಗ ಎಲ್ಲರೂ ತೀವ್ರವಾಗಿ ವಿರೋಧಿಸುತ್ತಾರೆ. ಆಗ ವಿಶ್ವೇಶ್ವರಯ್ಯ ಅವರು ಎಲ್ಲರ ಮನವೊಲಿಸಿ ಒಪ್ಪಿಸುತ್ತಾರೆ. ಪರಿಣಾಮ 1916 ಅಕ್ಟೋಬರ್ 12ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಥಮ ಸಿಂಡಿಕೇಟ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾರೆ ಎಂದು ಸ್ಮರಿಸಿದರು.

ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಮೈಸೂರು ವಿವಿ ಸಂಸ್ಥಾಪನಾ ದಿನಾಚರಣೆ ಸಮಯದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಾತ ಮುಮ್ಮುಡಿ ಕೃಷ್ಣರಾಜ ಒಡೆಯರ್. ರಾಜಶ್ರೀ ಸ್ಕೂಲ್ ಅನ್ನು ಮೊದಲು ಶುರು ಮಾಡಿದರು. ಆರ್ಥಿಕವಾಗಿ ಹಿಂದುಳಿದವರು ಇಲ್ಲಿ ಶಿಕ್ಷಣ ಪಡೆಯಬಹುದಿತ್ತು. 10ನೇ ಚಾಮರಾಜ ಒಡೆಯರ್ ಕಾಲದಲ್ಲಿ ಇದು ಮತ್ತಷ್ಟು ಪ್ರವರ್ಧಮಾನಕ್ಕೆ ಬಂತು. ಉನ್ನತ ಶಿಕ್ಷಣಕ್ಕೆ ಮೈಸೂರಿಗರು ಮದ್ರಾಸ್ ವಿವಿಯನ್ನು ಆಶ್ರಯಿಸಬೇಕಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿವಿಯನ್ನು ಸ್ಥಾಪನೆ ಮಾಡಿದರು. ಮೈಸೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿದಂತೆ ಇತರರು ಇದ್ದರು.

Key words: National –Education- Policy -RN Ravi-mysore university-Hemanth kumar

ENGLISH SUMMARY…

National Education Policy a strong foundation to build self-dependent India: R.N. Ravi
Mysuru, July 27, 2022 (www.justkannada.in): “The National Education Policy – 2020 plays a vital role in transforming the education system of India,” observed Tamil Nadu Governor R.N. Ravi.
He participated in the University of Mysore Foundation Day held at the Crawford Hall in Mysuru today. He offered floral tributes to the founder Nalwadi Krishnaraja Wadiyar and addressed the gathering. “The University of Mysore was established during British rule and hence has a long history. The University of Mysore is a contribution of the Mysuru King. Nalwadi Krishnaraja Wadiyar established the University in the presence of colonialism. As a result, it has helped lakhs of students of the State and has continued to do so,” he said.
“The NEP 2020 is a very important thing in the education system of our country. It plays a vital role in building confidence and skills among the children. It also gives importance to the overall development of the children. It helps in providing a strong platform for building a self-dependent India by transforming the entire education system. Along with Sanskrit prominence is given to other vernacular languages,” he explained.
In his address, Prof. G. Hemanth Kumar, Vice-Chancellor, University of Mysore said that it is a day of celebration for all of us. “Nalwadi Krishnaraja Wadiyar established the University of Mysore about 106 years ago. The Maharaja strove for the overall development of the State and established this University, he was a visionary. Mahatma Gandhiji called Nalwadi Krishnaraja Wadiyar a ‘Rajarishi’. Every step he took became a significant milestone in the progress of our state. His contributions to education, sports, culture, agriculture, industries, etc., is immense,” he observed.
Scion of the Mysuru Wadiyar family Yaduveer Krishnadatta Chamaraja Wadiyar, in his address, said that Nalwadi Krishnaraja Wadiyar’s grandfather Mummudi Krishnaraja Wadiyar had started the Rajashri School. Children hailing from financially weaker sections were allowed to study there. It came to the limelight during the 10th Chamaraja Wadiyar’s time. The people of Mysuru were depending on Madras University for higher education. Nalwadi Krishnaraja Wadiyar established the University of Mysore to help the students seeking higher education,” he observed.
Prof. R. Shivappa, Registrar, University of Mysore, and others were present.
Keywords: Foundation Day/ University of Mysore/ Tamil Nadu Governor