ನಂಜನಗೂಡಿನಲ್ಲಿ ಮಹಿಷನಿಗೆ ಅವಮಾನ: ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ- ಮಾಜಿ ಮೇಯರ್ ಪುರುಷೋತ್ತಮ್.

ಮೈಸೂರು,ಡಿಸೆಂಬರ್,27,2023(www.justkannada.in): ನಿನ್ನೆ ನಂಜನಗೂಡಿನಲ್ಲಿ ಮಹಿಷನಿಗೆ ಅವಮಾನ ಮಾಡಲಾಗಿದೆ. ನಂಜನಗೂಡಿನಲ್ಲಿ ನಡೆದ ಘಟನೆಯನ್ನ ನಾವು ಖಂಡಿಸುತ್ತೇವೆ. ಈ ಸಂಬಂಧ ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಮಾಜಿ ಮೇಯರ್ ಹಾಗೂ  ಮಹಿಷಾ ದಸರಾ ಆಚರಣೆ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಪ್ರತಿಯೊಬ್ಬರಿಗೂ ತಮ್ಮದೇ ಆದ ಆಚರಣೆ ಮಾಡಲಿಕ್ಕೆ ಸಂವಿಧಾನದಲ್ಲಿ ಅವಕಾಶವಿದೆ. ನಂಜನಗೂಡಿನಲ್ಲಿ ನಡೆದ ಘಟನೆಯನ್ನ ನಾವು ಖಂಡಿಸುತ್ತೇವೆ. ಈ ದೇಶದಲ್ಲಿ ಸುಡುವ ಸಂಸ್ಕೃತಿಯನ್ನ ವಿರೋಧಿಸುತ್ತೇವೆ. ಕೆಲವರು ದಲಿತ ಸಂಘರ್ಷ ಸಮಿತಿ ಮುಖಂಡರ ಮೇಲೆ ಎಫ್ ಐಆರ್ ದಾಖಲೆ ಮಾಡಿದ್ದಾರೆ. ಬಹುಸಂಖ್ಯಾತರಿಗೆ ಈ ಘಟನೆಯಿಂದ ನೋವಾಗಿದೆ. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ನಾವು ಈ ವಿಚಾರವಾಗಿ ಕಾನೂನು ಹೋರಾಟ ಮುಂದುವರೆಸುತ್ತೇವೆ ಎಂದರು.

ಕಾಂತರಾಜ್ ವರದಿ ಜಾರಿ ಮಾಡುವ ಶಕ್ತಿ ಸಾಮರ್ಥ್ಯ ಇರುವುದು ಕೇವಲ ಸಿದ್ದರಾಮಯ್ಯಗೆ ಮಾತ್ರ.

ರಾಜ್ಯದಲ್ಲಿ ಆರೂವರೇ ಕೋಟಿ ಜನಸಂಖ್ಯೆ ಇದೆ. ಪರಿಶಿಷ್ಟ ಸಮುದಾಯ ಒಂದು ಮುಕ್ಕಾಲು ಕೋಟಿ ಜನ ಇದ್ದೇವೆ. ಈಗಿದ್ದರೂ ನಮಗೆ ಸಂವಿಧಾನ ಪ್ರಕಾರ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ ಅಂದರೆ ಹೇಗೆ. ಜಾತಿಗನುಗುಣವಾಗಿ ಆರ್ಥಿಕ,  ಸಾಮಾಜಿಕ, ರಾಜಕೀಯ ಮೀಸಲಾತಿ ಸಿಗಬೇಕು. ಈಗಾಗಲೇ ಬಹುತೇಕರು ಕಾಂತರಾಜ್ ವರದಿ ಮಾಡಲು ಒತ್ತಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಕಾಂತರಾಜ್ ವರದಿಯನ್ನ ಜಾರಿ ಮಾಡಬೇಕು. ಕಾಂತರಾಜ್ ವರದಿ ಜಾರಿ ಮಾಡುವ ಶಕ್ತಿ ಸಾಮರ್ಥ್ಯ ಇರುವುದು ಕೇವಲ ಸಿದ್ದರಾಮಯ್ಯಗೆ ಮಾತ್ರ. ಆ ಶಕ್ತಿ ಸಿದ್ದರಾಮಯ್ಯಗಿದೆ. ಸಿದ್ದರಾಮಯ್ಯನವರು ಕಾಂತರಾಜ್ ವರದಿ ಜಾರಿ ಮಾಡಬೇಕು ಎಂದು ಪುರುಷೋತ್ತಮ್ ಹೇಳಿದರು.

Key words: Nanjangudu- Mahisha -mysore- former mayor- Purushottam.