ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕೈಚಳಕ: ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕಾರ್ಯ ಪೂರ್ಣ.

ಮೈಸೂರು,ಡಿಸೆಂಬರ್,27,2023(www.justkannada.in): 2024ರ ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯಾಗಲಿದ್ದು  ದಿನಗಣನೆ ಆರಂಭವಾಗಿದೆ. ಈ ಮಧ್ಯೆ  ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಕೆತ್ತನೆ  ಕಾರ್ಯ ಪೂರ್ಣಗೊಂಡಿದೆ.

ಮೈಸೂರಿನ ಅರುಣ್ ಯೋಗಿರಾಜ್ ಕೈಯಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿ ಮೂಡಿ ಬಂದಿದೆ. ದೇಶದ ಮೂವರು ಪ್ರಖ್ಯಾತ ಶಿಲ್ಪಿಗಳಿಗೆ ಕಾಯಕ ದಕ್ಕಿದ್ದು, ಜನವರಿ 22ರಂದು ರಾಮ್ ಲಲ್ಲಾ ಮೂರ್ತಿ ಲೋಕಾರ್ಪಣೆಯಾಗಲಿದೆ.  ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಪ್ರತ್ಯೇಕ ಮೂರ್ತಿ ಕೆತ್ತನೆ  ಮಾಡಿದ್ದಾರೆ.

ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮಾಡಲಾಗಿದ್ದು, ಪ್ರತಿಮೆಯನ್ನು ಪೂರ್ಣಗೊಳಿಸಲು ಆರು ತಿಂಗಳು ತೆಗೆದುಕೊಂಡಿದ್ದಾರೆ . ರಾಮಲಲ್ಲಾ ಮೂರ್ತಿ  ಅಡಿಯಿಂದ ಹಣೆಯವರೆಗೆ 51 ಇಂಚು ಎತ್ತರವಿದ್ದು, ಪ್ರತಿಮೆಯು “ಪ್ರಭಾವಳಿ” ಸೇರಿದಂತೆ ಎಂಟು ಅಡಿ ಎತ್ತರ  ಮೂರೂವರೆ ಅಡಿ ಅಗಲ ಹೊಂದಿದೆ.

ಐದು ವರ್ಷದ ಮಗುವಿನಂತೆ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಭಗವಾನ್ ರಾಮ, ಮೂರು ಪ್ರತಿಮೆಗಳಲ್ಲಿ ಒಂದನ್ನು ಅಯೋಧ್ಯೆಯ ರಾಮಮಂದಿರದಲ್ಲಿ ಅಂತಿಮ ಪ್ರತಿಷ್ಠಾಪನೆ ಮಾಡಲಾಗುತ್ತದೆ ರಾಮಮಂದಿರ ನಿರ್ಮಾಣ ಸಮಿತಿ ಆಯ್ಕೆ ಮಾಡಲಿದ್ದು, ಈ ಪ್ರತಿಮೆ ಅಂತಿಮಗೊಂಡರೆ, ಪ್ರಧಾನಿ ನರೇಂದ್ರ ಮೋದಿ ಅವರಿಂದ  ಈ ರಾಮಲಲ್ಲಾ ಮೂರ್ತಿ ಉದ್ಘಾಟನೆಯಾಗಲಿದೆ

ಉದ್ಘಾಟನೆಗೆ ಆಹ್ವಾನಿಸಲಾದ 2,000 ಗಣ್ಯರಲ್ಲಿ ಅರುಣ್ ಕೂಡ ಒಬ್ಬರಾಗಿದ್ದಾರೆ. ಅರುಣ್ ಎಂಬಿಎ ಪದವೀಧರರಾಗಿದ್ದು, ಐದನೇ ತಲೆಮಾರಿನ ಶಿಲ್ಪಿಯಾಗಿದ್ದಾರೆ. 40 ವರ್ಷದ ಅರುಣ್ 2008ರಲ್ಲಿ ಪ್ರತಿಮೆಗಳನ್ನು ಕೆತ್ತುವ ಸಂಪ್ರದಾಯವನ್ನು ಮುಂದುವರಿಸಿದ್ದಾರೆ. ಈವರೆಗೆ 1,000 ಕ್ಕೂ ಹೆಚ್ಚು ಪ್ರತಿಮೆಗಳನ್ನು ಸಿದ್ಧಪಡಿಸಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ಆಗಮಿಸುವಂತೆ  ಆಹ್ವಾನಪತ್ರಿಕೆಯನ್ನ ನೀಡಲಾಗಿದ್ದು, ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರಿಗೆ ಸ್ವಾಗತ ಅಂತ ಪತ್ರದಲ್ಲಿ ಆರಂಭಿಸಲಾಗಿದೆ.  ಜೈ ಶ್ರೀರಾಮ್ , ಒಳ್ಳೆಯದಕ್ಕಾಗಿ ಪ್ರಾರ್ಥಿಸಿ, ಪ್ರತಿಯೊಬ್ಬರ ಒಳಿತಿಗಾಗಿ ಹಾರೈಸಿ. ಐತಿಹ್ಯ ಕಾರ್ಯಕ್ರಮದಲ್ಲಿ‌ ಭಾಗಿಯಾಗಲು ನಿಮಗೆ ಸ್ವಾಗತ ವಿಗ್ರಹದ ಪ್ರಾಣಪ್ರತಿಷ್ಠಾಪನೆಗೆ ಸಾಕ್ಷಿಯಾಗಿ. ಶುಕ್ಲ‌ದ್ವಾದಶಿ, ವಿಕ್ರಮ‌ಸಂವತ್ಸರ 2080 ಸೋಮವಾರ ಜನವರಿ 22,2024 ಕ್ಕೆ ಸ್ವಾಗತ ಎಂದು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಜ.20 ರಂದೇ  ಅಯೋಧ್ಯೆ ತಲುಪುವಂತೆ ಆಹ್ವಾನ ಪತ್ರಿಕೆಯಲ್ಲಿ ಮನವಿ ಮಾಡಲಾಗಿದೆ.  ಎರಡು ಸಾವಿರ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು  ರಾಮ್‌ಲಲ್ಲಾ ಮೂರ್ತಿ ಶಿಲ್ಪಿ ಅರುಣ್ ಯೋಗಿರಾಜ್ ಗೆ ಆಹ್ವಾನಿಸಲಾಗಿದೆ.

ಆಡಳಿತ ಮಂಡಳಿಯು 12 ಅಂಶಗಳ ನಿಯಮಾವಳಿ ರೂಪಿಸಿದ್ದು,  ಕಠಿಣ ನಿಯಮಾವಳಿಗಳನ್ನ ಪಾಲಿಸುವಂತೆ ಆಹ್ವಾನಿತರಿಗೆ ಮನವಿ ಮಾಡಿದೆ.

Terms And Conditions.

1.ಜನವರಿ 20 ರೊಳಗೆ ಅಯೋಧ್ಯೆ ತಲುಪಿ. ಸಾಧ್ಯವಾಗದಿದ್ದರೆ ಜ.21 ರ‌ ಮಧ್ಯಾಹ್ನದೊಳಗೆ ತಲುಪಿ.

  1. ಆಧಾರ್ ಕಾರ್ಡ್ ಜೊತೆಗಿರಿಸಿಕೊಳ್ಳಿ.
  2. ಭದ್ರತೆಯ ದೃಷ್ಠಿಯಿಂದ ಮೊಬೈಲ್, ಪರ್ಸ್ ಸೇರಿ ಇತರೆ ವಸ್ತುಗಳನ್ನ ತರಬೇಡಿ.
  3. ಬೆಳಗ್ಗೆ 11 ಗಂಟೆಯ ಒಳಗೆ ನಿಗದಿತ ಸ್ಥಳ ತಲುಪಿ.
  4. ಮೂರು ಗಂಟೆಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಯಾರೂ ಓಡಾಡಬಾರದು. ತಮ್ಮ ನಿಗದಿತ ಸ್ಥಳದಲ್ಲಿಯೇ ಇರಬೇಕು. ಸುಖಾಸುಮ್ಮನೆ ಓಡಾಡಬೇಡಿ.

6.ಪ್ರಾಣ ಪ್ರತಿಷ್ಠಾನ ದಿನ ಒಂದು ವೇಳೆ ಬರಲು ಸಾಧ್ಯವಾಗದಿದ್ದರೆ ,ಫೆಬ್ರವರಿ ತಿಂಗಳಲ್ಲಿ ಯಾವಾಗಲಾದರೂ ಬನ್ನಿ..

  1. ಆಹ್ವಾನ ಪತ್ರಿಕೆ ಒಬ್ಬರಿಗೆ ಮಾತ್ರ ನೀಡಲಾಗಿದೆ.‌ ಕಾರ್ಯಕ್ರಮಕ್ಕೆ ಬರುವಾಗ ಆಹ್ವಾನ ಪತ್ರಿಕೆ ಮರೆಯದೆ ತರಬೇಕು. ಆಹ್ವಾನ ಪತ್ರಿಕೆಯನ್ನ ಜೊತೆಯಲ್ಲಿಯೇ ಇಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಆಹ್ವಾನ ಪತ್ರಿಕೆ ವರ್ಗಾಯಿಸುವಂತಿಲ್ಲ.
  2. ಕಡಿಮೆ ಸ್ಥಳಾವಕಾಶ ಇರುವ ಕಾರಣ , ಆಹ್ವಾನಿತ ಗಣ್ಯರಿಗೆ ನಿಗದಿತ ಸ್ಥಳದಲ್ಲಿ ಖುರ್ಚಿ ವ್ಯವಸ್ಥೆ ಮಾಡಲಾಗಿದ್ದು, ಅದೇ ಸ್ಥಳದಲ್ಲಿ ಕೂರಬೇಕು. ಯಾವುದೇ ಕಾರಣಕ್ಕೂ ತಡವಾಗಿ ಬರಬೇಡಿ.

9.ಪ್ರಧಾನಿ ನರೇಂದ್ರಮೋದಿ ಅವರು ಆಗಮಿಸುವ ಕಾರಣ ಹೆಚ್ಚಿನ ಭದ್ರತೆ ನಿಯೋಜನೆ ಮಾಡಲಾಗುವುದು. ಈ ವೇಳೆ ಭದ್ರತಾ ಸಿಬ್ಬಂದಿಗೆ ಸಹಕರಿಸಬೇಕು.

  1. ಮಕ್ಕಳಿಗೆ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶ ಇಲ್ಲ.
  2. ಪ್ರಧಾನಿ ನರೇಂದ್ರಮೋದಿ ಅವರು ರಾಮ್ ಲಲ್ಲಾ ದರ್ಶನಕ್ಕೆ ಹೋದಾಗ ಆಹ್ವಾನಿತರು ಕುಳಿತ ಸ್ಥಳದಲ್ಲೇ ಕೂರಬೇಕು. ಅವರು ದರ್ಶನ ಮುಗಿಸಿ ತೆರಳಿದ ಬಳಿಕ ಆಹ್ವಾನಿತರು ದರ್ಶನ ಮಾಡಬೇಕು.
  3. ಕಾರ್ಯಕ್ರಮದಲ್ಲಿ‌ ಭದ್ರತೆ ಒದಗಿಸುವ ದೃಷ್ಠಿಯಿಂದ ಆಹ್ವಾನಿತರಿಗೆ ಐಡಿ ಕಾರ್ಡ್ ನೀಡಲಾಗುವುದು. ಪ್ರಾಣ ಪ್ರತಿಷ್ಠಾನ ಸಮಾರೋಹ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ರಿಜಿಸ್ಟರ್ ಆದ ಮೇಲೆ ಫಾರಂ ನೀಡಲಾಗುವುದು. ಆ ಫಾರಂ ಭರ್ತಿ ಮಾಡಿ ಆನ್ ಲೈನ್ ನಲ್ಲೇ ಕಳುಹಿಸಬೇಕು. ಅದಾದ ಬಳಿಕ ಕ್ಯೂ ಆರ್ ಕೋಡ್ ಇರುವ ಐಡಿ ಕಾರ್ಡ್ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಅಯೋಧ್ಯೆಯಲ್ಲಿ ವೇದ್, ಲಖ್ನೋದಲ್ಲಿ ದೀರೇಂದ್ರ ಪ್ರತಾಪ್ ಜೀ, ಕಾಶಿಯಿಂದ ಡಾ.ಹರೇಂದ್ರ ರೈ ಸಂಪರ್ಕಿಸುವಂತೆ ಆಹ್ವಾನ ಪತ್ರಿಕೆಯಲ್ಲಿ‌ ಮನವಿ‌ ಮಾಡಿದ್ದಾರೆ.

Key words: Mysore –sculptor- Arun Yogiraj-Ayodhya- Ramlalla –statue- complete