ಕೊರೊನಾಗೆ ನಂಜನಗೂಡು ಕಾನ್ಸ್ ಟೇಬಲ್ ಸಾವು

ಮೈಸೂರು, ಆಗಸ್ಟ್, 27, 2020(www.justkannada.in) ; ಕೊರೊನಾ ಪಾಸಿಟಿವ್ ಗೆ ತುತ್ತಾಗಿದ್ದ ನಂಜನಗೂಡು ಪೊಲೀಸ್ ಸ್ಟೇಷನ್  ಕಾನ್ ಸ್ಟೇಬಲ್ ಮಹಾದೇವಸ್ವಾಮಿ ಬುಧವಾರ ಸಂಜೆ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಮೃತ ಪಟ್ಟಿದ್ದಾರೆ.

jk-logo-justkannada-logo

ಮಹಾದೇವಸ್ವಾಮಿ ಗುಂಡ್ಲುಪೇಟೆಯ ಸೋಮನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಒಂದು ವರ್ಷದಿಂದ ನಂಜನಗೂಡು ಪೊಲೀಸ್ ಸ್ಟೇಷನ್ ನಲ್ಲಿ ಕಾನ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಆಗಸ್ಟ್ 12 ರಂದು ಕೊರೊನಾಗೆ ತುತ್ತಾಗಿದ್ದರು. ಕೊರೊನಾ ಪಾಸಿಟಿವ್ ಬಂದ ಬಳಿಕ ಹೋಮ್ ಐಸೋಲೇಸನ್ ನಲ್ಲಿದ್ದರು. ಆದರೆ, ಉಸಿರಾಟದ ಸಮಸ್ಯೆ ಜಾಸ್ತಿಯಾದ ಹಿನ್ನೆಲೆಯಲ್ಲಿ ಮೈಸೂರು ಜೆಎಸ್ ಎಸ್ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿಯೇ ಮೃತ ಪಟ್ಟಿದ್ದಾರೆ.

key words ; Nanjanagudu-Constable-death-Corona