ನಂದಿನಿ ಸಂಸ್ಥೆಗಾಗಿ ರಕ್ತಕ್ರಾಂತಿ ನಡೆಯುತ್ತೆ:  ಬಿಟ್ಟುಕೊಡುವ ಮಾತೇ ಇಲ್ಲ- ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ.

ಬೆಂಗಳೂರು,ಜನವರಿ,4,2023(www.justkannada.in):  ನಂದಿನಿ ಮತ್ತು ಅಮೂಲ್ ಸಂಸ್ಥೆ ವಿಲೀನ ಬಗ್ಗೆ ಸುದ್ದಿ ಹಬ್ಬಿರುವ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ನಂದಿನಿ ಸಂಸ್ಥೆಗಾಗಿ ರಕ್ತಕ್ರಾಂತಿ ನಡೆಯುತ್ತೆ. ಬಿಟ್ಟುಕೊಡುವ ಮಾತೇ ಇಲ್ಲ ಎಂದಿದ್ದಾರೆ.

ಈ ಕುರಿತು ಮಾತಾನಾಡಿದ ಸಿಎಂ ಇಬ್ರಾಹಿಂ, ನಂದಿನಿ ಅಮೂಲ್ ಸಂಸ್ಥೆ ವಿಲೀನ ಮಾಡಬಾರದು. ನಂದಿನಿ ರೈತರು ಕಟ್ಟಿದ ಸಂಸ್ಥೆ. ಈ ಸಂಸ್ಥೆ ಬಿಟ್ಟುಕೊಡುವ ಮಾತೇ ಇಲ್ಲ  ಎಂದರು.

ರಸ್ತೆ, ಚರಂಡಿ ಸಣ್ಣ ಸಣ್ಣ ವಿಚಾರ ಬಿಟ್ಟುಬಿಡಿ, ಲವ್ ಜಿಹಾದ್ ಬಗ್ಗೆ ಗಮನ ಕೊಡಿ ಎಂಬ ನಳೀನ್ ಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ,  ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಮುಂದೆ ಬೆಳೆಯೋ ಮಕ್ಕಳಿಗೆ ರಾಜ್ಯಾಧ್ಯಕ್ಷರು ಯಾವ ರೀತಿ ಸಂದೇಶ ನೀಡಿದ್ದಾರೆ? ಏನು ಪಾಠ ಮಾಡ್ತಿದ್ದಾರೆ? ಅಂತಾ ಇದರಲ್ಲಿ ಗೊತ್ತಾಗ್ತಿದೆ. ಚುನಾವಣೆಯಲ್ಲಿ ಇಂಥವರನ್ನ ಜನರೇ ಒದ್ದು ಹೊರಗೆ ಹಾಕ್ಬೇಕು ಎಂದು ಕಿಡಿಕಾರಿದರು.

Key words: Nandini-amul- organization – JDS- State- President -CM Ibrahim.