ಕೀಳುಪದ ಬಳಕೆ ಸಿದ್ಧರಾಮಯ್ಯಗೆ ಗೌರವ ತರುವಂತಹದಲ್ಲ: ಕ್ಷಮೆ ಕೇಳುವಂತೆ ಸಚಿವ ಆರ್.ಅಶೋಕ್ ಆಗ್ರಹ.

ಬೆಂಗಳೂರು,ಜನವರಿ,4,2023(www.justkannada.in):  ಪ್ರಧಾನಿ ಮೋದಿ ಮುಂದೆ ಸಿಎಂ ಬಸವರಾಜ ಬೊಮ್ಮಾಯಿ ನಾಯಿಮರಿಯಂತೆ ಇರುತ್ತಾರೆ ಎಂಬ ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿಕೆಗೆ ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಸಿದ್ಧರಾಮಯ್ಯ ಕಾಂಗ್ರೆಸ್ ಸಂಸ್ಕೃತಿ ತೋರಿಸಿದ್ದಾರೆ.  ಕೀಳುಪದ ಬಳಕೆ ಸಿದ್ಧರಾಮಯ್ಯಗೆ ಗೌರವ ತರುವಂತದಲ್ಲ. ಸೋನಿಯಾ ಗಾಂಧಿ,  ರಾಹುಲ್ ಗಾಂಧಿ, ಮುಂದೆ  ನಿಮ್ಮ ಗುಲಾಮಗಿರಿ. ಡಿಕೆ ಶಿವಕುಮಾರ್ ಮುಂದೆಯೇ ನಿಮಗೆ ಬಾಲ ಬಿಚ್ಚೋಕೆ ಆಗಲ್ಲ. ಸಿದ್ಧರಾಮಯ್ಯ ಕೂಡ ಸಂಸ್ಕೃತಿ ಹೀನರು. ಸಿಎಂ ಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ. ಸಿಎಂ ಬಳಿ  ಕ್ಷಮೆ ಕೇಳುವಂತೆ ಆಗ್ರಹಿಸಿದರು.

 2023ಕ್ಕೆ ಮತ್ತೆ ಬೊಮ್ಮಾಯಿ  ಸಿಎಂ ಆಗುತ್ತಾರೆ- ಸಚಿವ ಸೋಮಣ್ಣ.

ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ವಿ.ಸೋಮಣ್ಣ,  2023ಕ್ಕೆ ಮತ್ತೆ ಬೊಮ್ಮಾಯಿ ಸಿಎಂ ಆಗ್ತಾರೆ .  ಬಸವರಾಜ ಬೊಮ್ಮಾಯಿ ಬಿಜೆಪಿಗಷ್ಟೇ ಸಿಎಂ ಅಲ್ಲ. ಇಡೀ ರಾಜ್ಯದ ಸಿಎಂ  ಮಾತನಾಡುವಾಗ ಎಚ್ಚರಿಕೆಯಿರಲಿ ಎಂದು ಹೇಳಿದರು.

Key words:  Minister -R. Ashok -demanded –apology–former CM-Siddaramaiah