ನಳೀನ್ ಕುಮಾರ್ ಕಟೀಲ್, ಅವಿವೇಕಿ, ತಲೆಕೆಟ್ಟಿದೆ- ದಿನೇಶ್ ಗುಂಡೂರಾವ್ ಹಿಗ್ಗಾಮುಗ್ಗಾ ವಾಗ್ದಾಳಿ

ಬೆಂಗಳೂರು,ಅಕ್ಟೋಬರ್,19,2021(www.justkannada.in):  ರಾಹುಲ್ ಗಾಂಧಿ ಓರ್ವ ಡ್ರಗ್ ಅಡಿಕ್ಟ್, ಪೆಡ್ಲರ್ ಎಂಬ  ವರದಿ ಇವೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್  ವಿರುದ್ಧ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ದಿನೇಶ್ ಗುಂಡೂರಾವ್,  ನಳೀನ್ ಕುಮಾರ್ ಕಟೀಲ್  ಅವಿವೇಕಿ ಅವರಿಗೆ ತಲೆಕೆಟ್ಟಿದೆ. ಅವಿವೇಕಿಯನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮೊದಲು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.covid-vaccine-cm-campaign-minister-statement-congress-leader-dinesh-gundurao

ನಳೀನ್ ಕುಮಾರ್ ಕಟೀಲ್ ಅವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಮನಸ್ಸು ಎಷ್ಟು ಕೊಳಕಾಗಿದೆ ಎಂಬುದು ಅವರ ಹೇಳಿಕೆಯಿಂದಲೇ ಗೊತ್ತಾಗುತ್ತಿದೆ. ಅವಿವೇಕಿಯನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದರು. +.

ನಳೀನ್ ಕಟೀಲ್ ಅವರಿಗೆ ಕ್ಷಮೆ ಕೇಳುವ ಅರ್ಹತೆಯೂ ಇಲ್ಲ. ಕಟೀಲು, ಯತ್ನಾಳ್, ಸಿ.ಟಿ.ರವಿ, ಹೆಗಡೆ ಇವರೆಲ್ಲ ಬಿಜೆಪಿ ಹೀರೋಗಳು. ಇವರು ಆಡುವ ಮಾತು, ಬಳಸುವ ಭಾಷೆ ಎಂಥಾದ್ದು ಎಂಬುದು ಜಗಜ್ಜಾಹೀರಾಗುತ್ತಿದೆ. ಇಂಥವರನ್ನೆಲ್ಲ ಬೆಂಬಲಿಸುವವರೇ ನರೇಂದ್ರ ಮೋದಿಯಂಥವರು ಎಂದು ಟೀಕಿಸಿದರು.

Key words: Naleen Kumar Kateel-stupid- congress-leader -Dinesh Gundurao