Monday, October 12, 2026

Dasara Wishes

BJP DasraWishes_JK DasraWishes JK
Happy Dasara
Home Front Page ರೈತರ ಹೋರಾಟವನ್ನ ರಾಜಕೀಯ ಹೋರಾಟ ಎಂದ ನಳೀನ್ ಕುಮಾರ್ ಕಟೀಲ್

ರೈತರ ಹೋರಾಟವನ್ನ ರಾಜಕೀಯ ಹೋರಾಟ ಎಂದ ನಳೀನ್ ಕುಮಾರ್ ಕಟೀಲ್

ಚಿತ್ರದುರ್ಗ,ಫೆಬ್ರವರಿ,6,2021(www.justkannada.in):  ಕೃಷಿ ತಿದ್ಧುಪಡಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟವನ್ನ ರಾಜಕೀಯ ಹೋರಾಟ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದಾರೆ.jk

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,  ರೈತರ ಹೋರಾಟ ರಾಜಕೀಯ ಹೋರಾಟ. ರೈತರ ಜತೆ ಕೇಂದ್ರ ಸರ್ಕಾರ ಅನೇಕ ಬಾರಿ ಮಾತುಕತೆ ನಡೆಸಿದೆ. ರೈತರ ಜತೆ ಎಡಪಕ್ಷ, ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿವೆ.  ರೈತರ ಹೆಸರಲ್ಲಿ ರಾಜಕೀಯ ನಡೆದಿದೆ ಎಂದು ಕಿಡಿಕಾರಿದರು.Naleen Kumar Kateel -- struggle –farmer- political struggle.

 ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ….

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಿಡಿಕಾರಿರುವ ನಳೀನ್ ಕುಮಾರ್ ಕಟೀಲ್, ಯತ್ನಾಳ್ ದಿನಕ್ಕೊಂದು ಮಾತನಾಡುತ್ತಿದ್ದಾರೆ. ದಿನಕ್ಕೊಂದು ಕನಸು ಕಾಣುತ್ತಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಶಿಸ್ತು ಸಮಿತಿಗೆ ವರದಿ ನೀಡಲಾಗಿದೆ. ಕೇಂದ್ರ ಸಮಿತಿ ತೀರ್ಮಾನ ಮಾಡಲಿದೆ. ಇನ್ನು ಸಿಎಂ ಬಿಎಸ್ ವೈ ವಿರುದ್ಧ ಶಾಸಕರು ತಿರುಗಿ ಬಿದ್ದಿಲ್ಲ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

Key words:  Naleen Kumar Kateel — struggle –farmer- political struggle.