Tuesday, August 4, 2026

BDA Apartments

Home Front Page ಬಿಜೆಪಿಯಿಂದ ಈಗ ರೌಡಿಗಳ ಅಪರೇಷನ್ ಎಂದ ಡಿಕೆ ಶಿವಕುಮಾರ್ ಗೆ ನಳೀನ್ ಕುಮಾರ್ ಕಟೀಲ್ ತಿರುಗೇಟು.

ಬಿಜೆಪಿಯಿಂದ ಈಗ ರೌಡಿಗಳ ಅಪರೇಷನ್ ಎಂದ ಡಿಕೆ ಶಿವಕುಮಾರ್ ಗೆ ನಳೀನ್ ಕುಮಾರ್ ಕಟೀಲ್ ತಿರುಗೇಟು.

ಬೆಂಗಳೂರು,ಡಿಸೆಂಬರ್,2,2022(www.justkannada.in): ಬಿಜೆಪಿಯಿಂದ ಈಗ ರೌಡಿಗಳ ಅಪರೇಷನ್ ಎಂದು ಟೀಕಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ನಳೀನ್ ಕುಮಾರ್ ಕಟೀಲ್,  ಡಿಕೆಶಿ ಯಾರ ಶಿಷ್ಯ  ಎಂದು ಬಹಿರಂಗವಾಗಿ ಹೇಳಬೇಕಿಲ್ಲ.  ಡಿಕೆಶಿ ಎಲ್ಲಿಂದ ರಾಜಕಾರಣಕ್ಕೆ ಬಂದರೆಂದು ಹೇಳಬೇಕಿಲ್ಲ.  ನನಗಿಂತ ಹೆಚ್ಚಾಗಿ ಬೆಂಗಳೂರಿನ ಜನತೆಗೆ ಡಿಕೆಶಿ ಬಗ್ಗೆ ಗೊತ್ತು ಎಂದು ಟಾಂಗ್ ನೀಡಿದರು.

ಬೆಳಿಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿ.ಕೆ ಶಿವಕುಮಾರ್, ಬಿಜೆಒಪಿಯವರದ್ದು ಒಂದೊಂದು ಆಪರೇಷನ್ ಇದೆ. ಈಗ ಬಿಜೆಪಿ ರೌಡಿಗಳ ಆಪರೇಷನ್ ಮಾಡುತ್ತಿದೆ. ಈಗಾಗಲೇ ಬೇರೆ ಬೇರೆ ಆಪರೇಷನ್ ಮಾಡಿ‍ದ್ದರು. ಅಭ್ಯರ್ಥಿಗಳ ಕೊರತೆ ಬಗ್ಗೆ ಅವರನ್ನೇ ಕೇಳಿ. ಬಿಜೆಪಿಯವರಿಗೆ ಶುಭವಾಗಲಿ. ಒಳ್ಳೆಯದಾಗಲಿ ಎಂದು ಕಾಲೆಳೆದಿದ್ದರು.

Key words: Naleen Kumar Kateel – DK Shivakumar – BJP – operation -rowdies.