ನಾಡ ಬಾಂಬ್ ಸ್ಪೋಟ:  ಮಹಿಳೆಯ ಮುಖ ಛಿದ್ರ ಛಿದ್ರ

ಮೈಸೂರು,ಜುಲೈ,25,2025 (www.justkannada.in): ನಾಡ ಬಾಂಬ್ ಸ್ಪೋಟಗೊಂಡು ಮಹಿಳೆಯ ಮುಖ ಛಿದ್ರ ಛಿದ್ರವಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಹುಳಲಾಲು ಗ್ರಾಮದಲ್ಲಿ ನಡೆದಿದೆ.

ಕಮಲಮ್ಮ (55) ಗಂಭೀರ ಗಾಯಗೊಂಡ ಮಹಿಳೆ. ಅಡಿಕೆಕಾಯಿ ಎಂದು ಭಾವಿಸಿ  ಮಹಿಳೆ ನಾಡ ಬಾಂಬ್ ಚೆಚ್ಚಿದ್ದು ಈ ವೇಳೆ ಗಂಭೀರ ಗಾಯಗೊಂಡಿದ್ದಾರೆ.

ಮನೆಯ ಮುಂಭಾಗದಲ್ಲಿರುವ ತೋಟದಲ್ಲಿ ಅಡಿಕೆಕಾಯಿ ಬಿದ್ದಿರಬಹುದು ಎಂದು ತಿಳಿದುಕೊಂಡಿದ್ದ ಮಹಿಳೆ ಅಡಿಕೆಕಾಯಿ ಎಂದು ಚಚ್ಚಿದ್ದಾರೆ. ಕಾಡು ಹಂದಿಗಳ ಹಾವಳಿ ತಪ್ಪಿಸಲು ರೈತರು ನಾಡ ಬಾಂಬ್ ಇಟ್ಟಿದ್ದರು ಎನ್ನಲಾಗಿದೆ.  ಅದನ್ನು ಅಡಿಕೆಕಾಯಿ ಎಂದು ಕಮಲಮ್ಮ ಮನೆಗೆ ತಂದಿದ್ದರು ಎನ್ನಲಾಗಿದೆ.

ಸುತ್ತಿಗೆಯಿಂದ ಚಚ್ಚಿದ ವೇಳೆ ಮುಖ ಕೈಕಾಲು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಗಾಯಾಳು ಕಮಲಮ್ಮಗೆ ಚಿಕಿತ್ಸೆ ನೀಡಲಾಗುತ್ತಿದೆ.

Key words: Nada bomb, blast, Woman, Injury, Mysore