ಮೈಸೂರು, ಸೆಪ್ಟಂಬರ್,8,2026 (www.justkannada.in): ಹಣಕಾಸಿನ ವಿಚಾರಕ್ಕೆ ಉಂಟಾದ ವಿವಾದ ವಿಕೋಪಕ್ಕೆ ತಿರುಗಿ, 20ರಿಂದ 25 ಮಂದಿಯ ಗುಂಪು ಮೂವರು ಯುವಕರ ಮೇಲೆ ಬಿಯರ್ ಬಾಟಲ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರು ತಾಲೂಕಿನ ಚಿಕ್ಕೇಗೌಡನ ಹೊಸಪುರ ಗ್ರಾಮದ ಬಳಿ ತಡವಾಗಿ ಬೆಳಕಿಗೆ ಬಂದಿದೆ.
ಸೆ. 6ರಂದು ಸಂಜೆ ಹಣದ ವಿಚಾರವಾಗಿ ಮಾತನಾಡಲು ತೆರಳಿದ್ದ ಗಾರೆ ಕೆಲಸ ಮಾಡುವ ಸ್ವಾಮಿ (22) ಎಂಬ ಯುವಕನೊಂದಿಗೆ ಕೆಲವರು ಜಗಳ ತೆಗೆದಿದ್ದಾರೆ. ಬಳಿಕ ರಾತ್ರಿ ರಾಯಣ್ಣ ಸರ್ಕಲ್ ಬಳಿ ಸ್ವಾಮಿ ಹಾಗೂ ಸ್ನೇಹಿತರಾದ ರಾಕೇಶ್ ಮತ್ತು ರವಿಕುಮಾರ್ ಮೇಲೆ ಗುಂಪು ಹಲ್ಲೆ ನಡೆಸಿದೆ ಎಂದು ಎಫ್ ಐಆರ್ ನಲ್ಲಿ ಆರೋಪಿಸಲಾಗಿದೆ.
ಆರೋಪಿ ಅರುಣ ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲ್‌ನಿಂದ ಸ್ವಾಮಿ ಅವರ ತಲೆ, ಕೆನ್ನೆ ಹಾಗೂ ಕಿವಿಗೆ ಹೊಡೆದು ರಕ್ತಗಾಯಗೊಳಿಸಿದ್ದಾನೆ. ಬಿಡಿಸಲು ಬಂದ ರಾಕೇಶ್ ಮತ್ತು ನಂತರ ಸ್ಥಳಕ್ಕೆ ಬಂದ ರವಿಕುಮಾರ್ ಮೇಲೂ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆದಿದೆ ಎನ್ನಲಾಗಿದೆ.
ಹಲ್ಲೆ ಬಳಿಕ “ಇಂದು ಬದುಕಿದ್ದೀರಿ, ಮುಂದೆ ಸಿಕ್ಕರೆ ಕೊಲೆ ಮಾಡುತ್ತೇವೆ” ಎಂದು ಬೆದರಿಕೆ ಹಾಕಿ ಆರೋಪಿಗಳು ಪರಾರಿಯಾಗಿದ್ದಾರೆ. ಮಾರ್ಗವಾಗಿ ಆಟೋದಲ್ಲಿ ತೆರಳುತ್ತಿದ್ದ ಮನೋಜ್ ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಗಾಯಾಳುಗಳನ್ನು 108 ಆಂಬುಲೆನ್ಸ್ ಮೂಲಕ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ 10 ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ENGLISH SUMMARY..
Mysuru: Three Injured in Beer Bottle Attack Over Money Dispute
Mysuru, Sept. 8: Three youths were allegedly assaulted with beer bottles by a group of 20–25 people over a financial dispute near Chikkegowdanahosuru village in Mysuru taluk.
Swamy (22), along with his friends Rakesh and Ravikumar, suffered injuries in the attack. The accused allegedly hit Swamy on the head, cheek and ear with a beer bottle and also assaulted his friends.
The attackers allegedly threatened to kill them if they were found again before fleeing the spot. The injured were shifted to K.R. Hospital by ambulance.
An FIR has been registered against 10 people, and police are investigating
Key words: Mysuru, Three Injured, Attack, Money Dispute






