ಮೈಸೂರು: IRC ನಿಯಮ ಉಲ್ಲಂಘನೆ – ಟ್ರಾಫಿಕ್ ಸಿಗ್ನಲ್ ಅಳವಡಿಕೆಯಲ್ಲಿ ಅಕ್ರಮದ ವಾಸನೆ

ಮೈಸೂರು,ಮಾರ್ಚ್,26,2026 (www.justkannada.in): ಮೈಸೂರು ನಗರದಲ್ಲಿ ಭಾರತೀಯ ರಸ್ತೆ ಕಾಂಗ್ರೆಸ್ (IRC) ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಟ್ರಾಫಿಕ್ ಸಿಗ್ನಲ್‌ ಗಳನ್ನು ಅಳವಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ವಕೀಲ ಅ.ಮ.ಭಾಸ್ಕರ್ ಅವರು ಸಲ್ಲಿಸಿದ RTI ಅರ್ಜಿಗೆ ಲಭ್ಯವಾದ ಮಾಹಿತಿಯಲ್ಲಿ ಗಂಭೀರ ಅಕ್ರಮದ ಸುಳಿವು ಕಾಣಿಸಿದೆ.

ವಿಪರ್ಯಾಸವೆಂದರೆ, ಈ ಸಿಗ್ನಲ್‌ ಗಳನ್ನು ಅಳವಡಿಸಿದ್ದು ಯಾರು ಎಂಬ ಮೂಲಭೂತ ಪ್ರಶ್ನೆಗೆ ಸಹ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ. ಟೆಂಡರ್ ಪ್ರಕ್ರಿಯೆ ನಡೆಸಿದೆಯೇ ಎಂಬ ವಿಚಾರಕ್ಕೂ ಅಧಿಕಾರಿಗಳಿಂದ “ಮಾಹಿತಿ ಲಭ್ಯವಿಲ್ಲ” ಎಂಬ ಉತ್ತರವೇ ಸಿಕ್ಕಿದೆ. ಇದರಿಂದ ಸಂಪೂರ್ಣ ಪ್ರಕ್ರಿಯೆಯೇ ಅನುಮಾನಾಸ್ಪದವಾಗಿದ್ದು, ಪಾರದರ್ಶಕತೆ ಪ್ರಶ್ನಾರ್ಥಕವಾಗಿದೆ.

IRC ನಿಯಮಗಳಿಗೆ ವಿರುದ್ಧವಾಗಿ ಸಂಚಾರಿ ದೀಪಗಳನ್ನು ಅಳವಡಿಸಿರುವುದು ಕಾನೂನು ಉಲ್ಲಂಘನೆಯಷ್ಟೇ ಅಲ್ಲದೆ, ಸಾರ್ವಜನಿಕ ಹಣದ ದುರುಪಯೋಗಕ್ಕೂ ಸೂಚಕವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಟೆಂಡರ್ ಇಲ್ಲದೆ ಕೆಲಸ ಕೈಗೊಳ್ಳಲಾಗಿದೆ ಎಂಬ ಅನುಮಾನದಿಂದ, ಕಮಿಷನ್ ಆಸೆಗೆ ದೀಪ ಅಳವಡಿಸಲಾಗಿದೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ.

ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಗರಿಕ ವಲಯ ಒತ್ತಾಯಿಸಿದೆ.

ENGLISH SUMMARY..

Mysuru: Illegal Traffic Signals Installed, RTI Reveals Irregularities

In Mysuru, traffic signals have allegedly been installed in violation of IRC guidelines, as revealed through an RTI filed by advocate A.M. Bhaskar.

Shockingly, authorities failed to clarify who installed the signals and whether any tender process was followed, stating that “information is not available.”

The irregular installation has raised serious concerns about transparency, with allegations of illegal practices and possible commission-driven decisions. Citizens are demanding a thorough investigation and strict action against those responsible.

Key words: Mysuru, Illegal, Traffic, Signals, RTI