Friday, September 4, 2026

BDA Apartments

Home Front Page ಮೈಸೂರು ದಸರಾ 2026: ಜಂಬೂಸವಾರಿಯಲ್ಲಿ ‘ಅಭಿಮನ್ಯು’ಗೆ ಮತ್ತೆ ಗೌರವದ ಸ್ಥಾನ

ಮೈಸೂರು ದಸರಾ 2026: ಜಂಬೂಸವಾರಿಯಲ್ಲಿ ‘ಅಭಿಮನ್ಯು’ಗೆ ಮತ್ತೆ ಗೌರವದ ಸ್ಥಾನ

ಮೈಸೂರು,ಸೆಪ್ಟಂಬರ್,4,2026 (www.justkannada.in): ಮೈಸೂರು ದಸರಾ-2026ರ ಜಂಬೂಸವಾರಿಯಲ್ಲಿ ಹಲವು ವರ್ಷಗಳ ಕಾಲ ಅಂಬಾರಿ ಹೊತ್ತಿರುವ ದಸರಾ ಆನೆ ಅಭಿಮನ್ಯುವನ್ನು ‘ನಿಶಾನೆ ಆನೆ’ಯಾಗಿ ಗೌರವಪೂರ್ವಕವಾಗಿ ಭಾಗವಹಿಸುವಂತೆ ಮಾಡಲು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಪ್ರಸ್ತಾವಿಸಿದ್ದಾರೆ.

ಸೆ.3ರಂದು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ ಸಂರಕ್ಷಣೆ) ಅವರಿಗೆ ಬರೆದ ಟಿಪ್ಪಣಿಯಲ್ಲಿ, ಮೈಸೂರು ದಸರಾ ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ವಿಶ್ವದಾದ್ಯಂತ ಸಾರುವ ಐತಿಹಾಸಿಕ ಉತ್ಸವ ಎಂದು ಸಚಿವರು ಉಲ್ಲೇಖಿಸಿದ್ದಾರೆ.

ದಸರಾ ಮಹೋತ್ಸವದಲ್ಲಿ ಹಲವು ವರ್ಷಗಳ ಕಾಲ ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ಅಂಬಾರಿ ಹೊತ್ತಿರುವ ಅಭಿಮನ್ಯು ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದಾನೆ. ಇತ್ತೀಚೆಗೆ ನಡೆದ ಅಭಿಮನ್ಯುವಿನ ಬೀಳ್ಕೊಡುಗೆ ಹಾಗೂ ಗೌರವ ಸಮಾರಂಭಕ್ಕೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಅಭಿಮನ್ಯುವಿನ ಅಮೂಲ್ಯ ಸೇವೆಯನ್ನು ಸ್ಮರಿಸುವ ಹಿನ್ನೆಲೆಯಲ್ಲಿ, ದಸರಾ-2026ರ ಜಂಬೂಸವಾರಿಯಲ್ಲಿ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಆತನಿಗೆ ವಿಶೇಷ ಗೌರವ ನೀಡಬೇಕು ಎಂದು ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.

ಅಭಿಮನ್ಯುವಿನ ಗೌರವಪೂರ್ವಕ ಉಪಸ್ಥಿತಿಯಿಂದ ದಸರಾ ಮಹೋತ್ಸವದ ವೈಭವ ಹಾಗೂ ಪರಂಪರೆಗೆ ಮತ್ತಷ್ಟು ಮೆರುಗು ಬರಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ENGLISH SUMMARY….

Mysuru Dasara 2026: Abhimanyu to Get Special Honour

Forest Minister Ramalinga Reddy has proposed that the iconic Dasara elephant Abhimanyu be given a special place as the ‘Flag Elephant’ (Nishane Elephant) in the 2026 Jamboo Savari.

The move aims to honour Abhimanyu’s years of dedicated service, including carrying the golden howdah, and celebrate his contribution to Mysuru Dasara’s rich tradition.

Key words: Mysuru Dasara 2026, Abhimanyu, Special Honour, Minister Ramalingareddy