Friday, September 4, 2026

BDA Apartments

Home Front Page ನಾನೇಕೆ ಯೂಟರ್ನ್ ಆಗಲಿ: ಬೆಂಗಳೂರಿಗೆ ಬಿಜೆಪಿ ಒಂದು ಯೋಜನೆ ಮಾಡಿದ್ದಾರಾ? ಸಿಎಂ ಡಿಕೆಶಿ

ನಾನೇಕೆ ಯೂಟರ್ನ್ ಆಗಲಿ: ಬೆಂಗಳೂರಿಗೆ ಬಿಜೆಪಿ ಒಂದು ಯೋಜನೆ ಮಾಡಿದ್ದಾರಾ? ಸಿಎಂ ಡಿಕೆಶಿ

 ಬೆಂಗಳೂರು,ಸೆಪ್ಟಂಬರ್,4,2026 (www.justkannada.in): ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಬಿಲ್ ವಾಪಸ್ ಪಡೆದಿದ್ದಕ್ಕೆ ಬಿಜೆಪಿ ಟೀಕೆ ಹಿನ್ನೆಲೆಯಲ್ಲಿ ಈ ಕುರಿತು ಸಿಎಂ ಡಿಕೆ ಶಿವಕುಮಾರ್  ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಮಾತನಾಡಿದ ಸಿಎಂ ಡಿಕೆ ಶಿವಕುಮಾರ್,   ಯೂಟರ್ನ್ ಶಿವಕುಮಾರ್ ಅಂತಾ ಏನೇನೋ ಹೇಳಿದ್ದಾರೆ ನಾನು ಯಾಕೆ ಯೂಟರ್ನ್ ಆಗಲಿ. ವಿಧೇಯಕದ ಬಗ್ಗೆ ಅಧೀವೇಶನದಲ್ಲಿ ಅವರು ಚರ್ಚೆ ಮಾಡಲಿಲ್ಲ ಹಿಂದಿನ ಕಾಲದಲ್ಲಿ ಏನೇನು ಆಗಿದೆ ಅಂತ ಪಟ್ಟಿ ಬಿಡುಗಡೆ ಮಾಡುತ್ತೇನೆ.  ಲಾಲ್ ಬಾಗ್ ಬಳಿ ಟನಲ್ ಮಾಡಬೇಕು ಅಂತಾ ಏನು ಇಲ್ಲ ಬೇರೆ ಜಾಗದಲ್ಲೂ ಟನಲ್ ಮಾಡಬೇಕೆಂಬ ಆಲೋಚನೆ ಇತ್ತು ಎಂದರು.

ಬೆಂಗಳೂರಿಗೆ ಏನಾದರೂ ಶಾಪ ಆದರೆ ಆದಕ್ಕೆ ಕಾರಣ ಬಿಜೆಪಿ.   ಬಿಜೆಪಿಯವರು ಬೆಂಗಳೂರಿಗೆ ಒಂದು ಯೋಜನೆ ಮಾಡಿದ್ದಾರಾ?  ಅಶೋಕ್,  ಹೆಚ್ ಡಿಕೆ, ಬಿವೈವಿ ಬಳಸುವ ಪದ ಉಪಯೋಗಿಸಲು ಇಷ್ಟವಿಲ್ಲ.   ನಾನು ಸಿಎಂ ಸ್ಥಾನದಲ್ಲಿದ್ದೇನೆ ಈ ಸ್ಥಾನಕ್ಕೆ ಗೌರವ ನೀಡಬೇಕು ನಮ್ರತೆಯಿಂದ ಕೇಳಿ ಕೊಳ್ಳುತ್ತೇನೆ. ನಾಲಿಗೆ ಹತೋಟಿಯಲ್ಲಿ ಹಿಡಿದುಕೊಳ್ಳಿ ಎಂದು ಸಿಎಂ ಡಿಕೆ ಶಿವಕುಮಾರ್ ಗುಡುಗಿದರು.

Key words: BJP, plan, Bengaluru,  CM DK Shivakumar