Monday, September 21, 2026

BDA Apartments

Home Crime ‘ರಾಮೇಶ್ವರಂ ಕೆಫೆ’ಯಲ್ಲಿ ನಿಗೂಢ ಸ್ಪೋಟ: ಹಲವರಿಗೆ ಗಂಭೀರ ಗಾಯ: ‘NIA’ ತಂಡ ಪರಿಶೀಲನೆ…

‘ರಾಮೇಶ್ವರಂ ಕೆಫೆ’ಯಲ್ಲಿ ನಿಗೂಢ ಸ್ಪೋಟ: ಹಲವರಿಗೆ ಗಂಭೀರ ಗಾಯ: ‘NIA’ ತಂಡ ಪರಿಶೀಲನೆ…

ಬೆಂಗಳೂರು ,ಮಾರ್ಚ್,1,2024(www.justkannada.in): ಬೆಂಗಳೂರಿನ ಕುಂದಲಹಳ್ಳಿಯ  ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿದ್ದು, ಹಲವರಿಗೆ ಗಂಭೀರ ಗಾಯಗಳಾಗಿದ್ದು, ಎನ್ ಐಎ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.

ಸ್ಫೋಟದ ತೀವ್ರತೆಗೆ ಕೆಫೆ ಹಾಳಾಗಿದ್ದು, ಘಟನೆಯಲ್ಲಿ ಮೂವರು ಸಿಬ್ಬಂದಿ ಹಾಗೂ ನಾಲ್ವರು ಗ್ರಾಹಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಲು ಸ್ಥಳಕ್ಕೆ ಎನ್ ಐಎ ತಂಡ ದೌಡಾಯಿಸಿದೆ. ಎನ್ ಐ ಎ ತಂಡ ಪರಿಶೀಲನೆ ನಡೆಸಿ ನಂತರ ಗಾಯಾಳುಗಳ ಬಗ್ಗೆ ಮಾಹಿತಿ ಪಡೆಯುತ್ತಿದೆ. 'ರಾಮೇಶ್ವರಂ ಕೆಫೆ'ಯಲ್ಲಿ ನಿಗೂಢ ಸ್ಪೋಟ rameshwaram cafe

ಹೊರಗಡೆಯಿಂದ ತಂದಿಟ್ಟಿದ್ದ ಬ್ಯಾಗ್ ​ನಲ್ಲಿನ ವಸ್ತು ಸ್ಫೋಟವಾಗಿದೆ. ಕೈ ತೊಳೆಯುವ ಸಿಂಕ್ ಇಟ್ಟಿದ್ದ ಜಾಗದಲ್ಲಿ ಇದ್ದ ಬ್ಯಾಗ್ ಸ್ಪೋಟ ನಡೆದಿದೆ ಎನ್ನಲಾಗಿದೆ. ಸಿ.ಸಿ ಕ್ಯಾಮರಾ ಪರೀಲನೆ ನಡೆಸಲಾಗುತ್ತಿದ್ದು, ಶಂಕಿತರಿಗಾಗಿ ಹುಡುಕಾಟ ನಡೆಯುತ್ತಿದೆ.  ಸ್ಥಳಕ್ಕೆ FSL ತಂಡ  ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Key words: Mysterious -explosion –bangalore- ‘Rameswaram Cafe