Wednesday, September 30, 2026

BDA Apartments

ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಷ್ಟಕ್ಕೆ ಮೈಸೂರಿಗರ ನೆರವು: ಅಗತ್ಯ ವಸ್ತು...
Home Front Page ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಷ್ಟಕ್ಕೆ ಮೈಸೂರಿಗರ ನೆರವು: ಅಗತ್ಯ ವಸ್ತುಗಳ ರವಾನೆ

ಉತ್ತರ ಕರ್ನಾಟಕ ನೆರೆ ಸಂತ್ರಸ್ತರ ಕಷ್ಟಕ್ಕೆ ಮೈಸೂರಿಗರ ನೆರವು: ಅಗತ್ಯ ವಸ್ತುಗಳ ರವಾನೆ

ಮೈಸೂರು, ಆಗಸ್ಟ್ 18, 2019 (www.justkannada.in): ನೆರೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರ ಕರ್ನಾಟಕ ಜನರ ನೆರವಿಗೆ ಮೈಸೂರಿಗರು ಧಾವಿಸಿದ್ದಾರೆ.

ಮೈಸೂರು ನಾಗರೀಕ ವೇದಿಕೆ ವತಿಯಿಂದ ಉತ್ತರ ಕರ್ನಾಟಕ ಜಿಲ್ಲೆಗಳ ನೆರೆ ಸಂತ್ರಸ್ತರಿಗಾಗಿ ಗೃಹೋಪಯೋಗಿ ವಸ್ತುಗಳ ರವಾನೆ ಮಾಡಲಾಗಿದೆ.

ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಎರಡು ಲಾರಿಗಳಿಗೆ ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಇಂದು ಹಸಿರು ನಿಶಾನೆ ತೋರಿದರು.

ಕಷ್ಟದಲ್ಲಿರುವ ಜನರ ಅಪೇಕ್ಷೇಯಂತೆ, ಮನೆ ಬಳಕೆಗೆ ಬೇಕಾದ ತಟ್ಟೆ, ಲೋಟ, ಸೌಟು, ಅಡುಗೆ ಪಾತ್ರ, ಸೋಪು, ಕೊಬ್ಬರಿ ಎಣ್ಣೆ, ಅಡುಗೆ ಎಣ್ಣೆ, ಬಟ್ಟೆ ಸೋಪು, ನಿರ್ಮಾ ಪೌಡರ್, ಪೇಸ್ಟು, ಬ್ರಷ್, ಎರಡು ಸೀರೆ, ಮಕ್ಕಳಿಗೆ ಅಂಗಿ, ಪಂಚೆ ಶರ್ಟು ಸೇರಿದಂತೆ ಸಂಸಾರಕ್ಕೆ ಉಯುಕ್ತವಾದ ವಸ್ತುಗಳು ಪ್ರತ್ಯೇಕವಾಗಿ ಪ್ಯಾಕ್ ಮಾಡಿ ರವಾನಿಸಲಾಯಿತು.

ಆರಂಭದಲ್ಲಿ ಗದಗ, ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರಿಗೆ ವಸ್ತುಗಳ ರವಾನೆ ಮಾಡಲಾಗಿದ್ದು, ನಂತರ ಉಳಿದ ಜಿಲ್ಲೆಗಳಿಗಳಿಗೂ ಅಗತ್ಯಾನುಸಾರ ಪರಿಹಾರ ಕೊಡಲು ಚಿಂತನೆ ನಡೆಸಲಾಗಿದೆ.