ಯಶ್‌ಟೆಲ್‌ನ ಎಕ್ಸಲೆಂಟ್ ಇಂಟರ್‌ನೆಟ್ ಸರ್ವೀಸ್

ಮೈಸೂರಲ್ಲಿ ಮೊದಲ ಬಾರಿಗೆ ಆಪ್ಟಿಕಲ್ ಫೈಬರ್ ಮೂಲಕ ನೆಟ್‌ಸೇವೆ
ಝೀರೋದಿಂದ ಹೀರೋ ಆದ ಹೆಬ್ಬಾಳ್ ಮಂಜುನಾಥ್

ಮೈಸೂರು: ಮೊಟ್ಟ ಮೊದಲ ಬಾರಿಗೆ ಮೈಸೂರಿನಲ್ಲಿ ಆಪ್ಟಿಕಲ್ ಫೈಬರ್ ಇಂಟರ್‌ನೆಟ್ ಸೇವೆ ನೀಡುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವವರು ಹೆಬ್ಬಾಳ್ ಮಂಜುನಾಥ್.
೧೯೯೭ರಲ್ಲಿ ವೃತ್ತಿ ಆರಂಭಿಸಿದಾಗ ಮಂಜುನಾಥ್ ಅವರ ವಯಸ್ಸು ಕೇವಲ ೧೯. ಮೈಸೂರಿನಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕೇಬಲ್ ಆಪರೇಟರ್ ಆಗಿ ಕೆಲಸ ಆರಂಭಿಸಿದವರಲ್ಲಿ ಇವರೇ ಮೊದಲಿಗರು. ನಂತರದ ದಿನಗಳಲ್ಲಿ ಝೀ ಇಂಟರ್ಯಾಕ್ಟಿವ್ ಮಲ್ಟೀಮೀಡಿಯಾ, ಕೇಬಲ್ ಆಪರೇಟರ್‌ಗಳಿಗೆ ಇಂಟರ್‌ನೆಟ್ ನೀಡ ಬೇಕೆಂಬ ಯೋಜನೆ ಆರಂಭಿಸಿದಾಗ ಅದರ ಕುರಿತು ಗಂಭೀರವಾಗಿ ಆಲೋಚಿಸಿದವರು ಮಂಜುನಾಥ್. ಮೈಸೂರಿಗರಿಗೆ ವೇಗದ ಇಂಟರ್‌ನೆಟ್ ಸೇವೆಯನ್ನು ಏಕೆ ನೀಡಬಾರದು ಎಂಬ ಆಲೋಚನೆಯೊಂದಿಗೆ ಯಶ್‌ಟೆಲ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸಿದರು.
ಯಶ್‌ಟೆಲ್ ಯಶಸ್ಸಿನ ಓಟ: ೨೦ ವರ್ಷಗಳ ಹಿಂದೆ ಕಾಪರ್‌ವೈರ್ ಮೂಲಕ ಇಂಟರ್‌ನೆಟ್ ಸೇವೆ ನೀಡುತ್ತಿದ್ದ ಬಿಎಸ್‌ಎನ್‌ಎಲ್‌ನಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು. ಆಗಾಗ ಸಂಪರ್ಕ ಕಡಿತಗೊಂಡು ಗ್ರಾಹಕರು ಕಿರಿ ಕಿರಿ ಅನುಭಸುವಂತಾಗುತ್ತಿತ್ತು. ಹೆಚ್ಚಿನ ವೇಗದ ಇಂಟರ್‌ನೆಟ್ ಸೇವೆ ಇಲ್ಲದೆ ಪರಿತಪಿಸುವಂತಾಗುತ್ತಿತ್ತು. ಮಳೆ ಬಂದರಂತೂ ಕಾಪರ್ ವೈರ್‌ಗಳಲ್ಲಿ ನೀರು ತುಂಬಿಕೊಂಡು ವಾರಗಟ್ಟಲೆ ಸಂಪರ್ಕ ಕಡಿತಗೊಳ್ಳುತ್ತಿತ್ತು. ಇದನ್ನೆಲ್ಲಾ ಮನಗಂಡ ಮಂಜುನಾಥ್, ಆಪ್ಟಿಕಲ್ ಫೈಬರ್ ಮೂಲಕ ಇಂಟರ್‌ನೆಟ್ ಸೇವೆ ನೀಡಲು ಮುಂದಾದರು. ಆ ಮೂಲಕ ಬೇರೆ ಇಂಟರ್‌ನೆಟ್ ಸಂಸ್ಥೆಗಳಿಗೂ ಮಾದರಿಯಾದರು. ಎಷ್ಟೋ ಮಂದಿ ಇವರನ್ನೆ ಅನುಸರಿಸಿ ಉದ್ಯಮ ಆರಂಭಿಸಿದ್ದೂ ಇದೆ. ಆದರೆ ಇಂಟರ್‌ನೆಟ್ ಉದ್ಯಮ ಆರಂಭಿಸಿದ ಮೊದಲ ದಿನಗಳನ್ನು ನೆನೆದು ಮಂಜುನಾಥ್ ಆಪ್ತರ ಬಳಿ ಇಂದಿಗೂ ಕಣ್ಣೀರಾಗುತ್ತಾರೆ.
ಜೀವದ ಗೆಳೆಯ ಉಮಾಶಂಕರ್ ಜತೆ ಊಟಕ್ಕೂ ಕಾಸಿಲ್ಲದೆ ಎಷ್ಟೋ ದಿನಗಳನ್ನು ಕಳೆದು, ನಿದ್ದೆ ಮಾಡಲು ಸಮಯಲ್ಲದೆ ಅವಿರತವಾಗಿ ಶ್ರಮಿಸಿದ ದಿನಗಳ ಕುರಿತು ತಮ್ಮ ನೌಕರರಿಗೆ ಉದಾಹರಣೆ ಕೊಡುತ್ತಾರೆ. ಉದ್ಯಮಕ್ಕೆ ಕಾಲಿಟ್ಟ ದಿನಗಳಲ್ಲಿ ವಯಸ್ಸು ಚಿಕ್ಕದು ಎನ್ನುವ ಕಾರಣಕ್ಕೆ ಬಹುತೇಕರು ಬೆಂಬಲ ನೀಡಲಿಲ್ಲ. ಹುಡುಗರಿಗೆ ಒಂದು ಅವಕಾಶ ಕೊಟ್ಟು ನೋಡೋಣ ಎಂದವರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇದನ್ನೇ ಸೂರ್ತಿಯಾಗಿ ತೆಗೆದುಕೊಂಡ ಮಂಜುನಾಥ್, ಗೆಳೆಯ ಉಮಾಶಂಕರ್ ಜತೆಗೆ ಹಗಲು ರಾತ್ರಿ ಶ್ರಮಿಸಿದರು. ಬಂಡವಾಳಕ್ಕಾಗಿ ಅಲೆದೂ ಸಾಕಾದಾಗ ತಾಯಿ ಜಯಲಕ್ಷ್ಮೀ ಮನೆ ಮೇಲೆ ಸಾಲ ಕೊಡಿಸಿ ಮಗನ ಉದ್ಯಮಕ್ಕೆ ಬಂಡ ವಾಳದ ವ್ಯವಸ್ಥೆ ಮಾಡಿ ಮಗನ ಆಸೆಗೆ ನೀರೆರೆದರು. ಚಿಕ್ಕ ವಯಸ್ಸಿನಲ್ಲಿಯೇ ತುಂಬು ಕುಟುಂ ಬದ ಜವಾಬ್ದಾರಿ ಹೆಗಲಿಗೇರಿಸಿಕೊಂಡ ಮಂಜುನಾಥ್ ಯಶ್‌ಟೆಲ್ ಇಂಟ ರ್‌ನೆಟ್ ಆರಂಭಿಸಿ ಮೈಸೂರಿಗರ ಮನೆಮಾತಾಗಿದ್ದಾರೆ.
ನೌಕರರ ಹಿತ ಬಯಸುವ ಬಾಸ್: ‘‘ಸಾಧನೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ’’. ಇದಕ್ಕೆ ಕೆ.ಎಂ.ಮಂಜುನಾಥ್ ಅವರೂ ಸ್ಪಷ್ಟ ನಿದರ್ಶನ. ಅಂದು ಕೊಂಡಿದ್ದನ್ನು ಸಾಸುವ ತನಕ ಹಠ ಬಿಡದ ಛಲಗಾರ. ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರ ಹಿತಕ್ಕಾಗಿ ಸದಾ ಚಿಂತಿಸುವ ಬಾಸ್. ಸ್ಥಳೀಯ ಪ್ರತಿಭೆಗಳಿಗೆ ಕೆಲಸ ಕೊಡುವ ಮೂಲಕ ಸುತ್ತಮುತ್ತಲಿನ ಹಳ್ಳಿಗಳ ಯುವ ಸಮುದಾಯಕ್ಕೆ ಇವರು ಆಶಾಕಿರಣರಾಗಿದ್ದಾರೆ. ಕೇಬಲ್ ಮಂಜು ಎಂದೇ ಜನಪ್ರಿಯರಾಗಿರುವ ಮಂಜುನಾಥ್ ಝೀರೋದಿಂದ ಹೀರೋ ಆದವರು. ವಿದ್ಯಾರ್ಥಿಯಾಗಿದ್ದಾಗಲೇ ಉದ್ಯಮಿಯಾಗುವ ಕನಸು ಕಂಡಿದ್ದರು. ಆ ಕನಸನ್ನು ನನಸು ಮಾಡಿಕೊಳ್ಳಲು ಬೇಕಾದ ತಯಾರಿಯನ್ನು ಅಂದೇ ಆರಂಭಿಸಿದ್ದರು.
ತ್ವರಿತ ಫಲಿತಾಂಶಕ್ಕೆ ನೆರವು: ೨೦೦೫ರ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗ ಯಶ್‌ಟೆಲ್ ಇಂಟರ್‌ನೆಟ್ ಸೇವೆಯನ್ನು ಬಳಸಿಕೊಂಡು ತ್ವರಿತ ಚುನಾವಣಾ ಫಲಿತಾಂಶ ನೀಡಿತ್ತು. ಮೈಸೂರು ನಗರಾಭಿವೃದ್ಧಿ ಪ್ರಾಕಾರ ನಡೆಸುವ ನಿವೇಶನಗಳ ಇ-ಹರಾಜು ಪ್ರಕ್ರಿಯೆಯಲ್ಲಿ ಯಶ್‌ಟೆಲ್ ಹಲವು ಬಾರಿ ತನ್ನ ಇಂಟರ್‌ನೆಟ್ ಸೇವೆ ನೀಡಿದೆ. ಮೊದಮೊದಲು ಚಿಕ್ಕದಾಗಿ ಆರಂಭವಾದ ಉದ್ಯಮ ಇಂದು ನೂರಾರು ಕುಟುಂಬಗಳನ್ನು ಪೋಷಿಸುತ್ತಿದೆ. ೨೦೧೯ರಲ್ಲಿ ಮಂಜುನಾಥ್, ತಮ್ಮ ಬಹುದಿನಗಳ ಕನಸಾದ ಹೊಟೇಲ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.
ಸಾಮಾಜಿಕ ಕಳಕಳಿ: ಉದ್ಯಮದಲ್ಲಿ ಇಷ್ಟೊಂದು ಸಾಧನೆ ಮಾಡಿರುವ ಮಂಜುನಾಥ್ ಇಂದಿಗೂ ಎಲೆಮರೆಯ ಕಾಯಿಯಂತೆ ಇರಲು ಬಯಸುತ್ತಾರೆ. ಕಷ್ಟ ಎಂದು ಬಳಿ ಬಂದವರನ್ನು ಎಂದಿಗೂ ಬರಿಗೈಯಲ್ಲಿ ಕಳುಹಿಸಿದ ಉದಾಹರಣೆ ಇಲ್ಲ. ಸದಾ ಪರರ ಹಿತ ಬಯಸುವ ಮಾನವೀಯ ಗುಣಗಳುಳ್ಳ ಅಪರೂಪದ ವ್ಯಕ್ತಿ ಮಂಜುನಾಥ್. ಲಾಕ್‌ಡೌನ್ ವೇಳೆಯಲ್ಲಿಯೂ ನೌಕರರಿಗೆ ಸಂಬಳ ನೀಡುವ ಮೂಲಕ ಮಾನವೀಯತೆ ಮೆರೆದ ಮಂಜುನಾಥ್ ಅವರ ಸಂಸ್ಥೆ ೫೦೦ಕ್ಕೂ ಹೆಚ್ಚು ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದೆ.
ಕೈಗೆಟುಕುವ ದರದಲ್ಲಿ ಸೇವೆ: ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ನೀಡುತ್ತಿರುವ ಯಶ್‌ಟೆಲ್, ಮೈಸೂರು, ಮಡಿಕೇರಿ, ಮಂಡ್ಯ, ಹಾಸನ, ಬಳ್ಳಾರಿ ಸೇರಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸೇವೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಸೇವೆ ವಿಸ್ತರಿಸಲಿದೆ. ಆರಂಭದ ದಿನಗಳಲ್ಲಿ ಎದುರಾದ ಸವಾಲುಗಳು ಒಂದೆರೆಡಲ್ಲ. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತ ಮಂಜುನಾಥ್ ಅವರು ಎಂದು ತಿರುಗಿ ನೋಡಲೇ ಇಲ್ಲ. ಇತರೆ ಕಂಪನಿಗಳ ಪೈಪೋಟಿ ಮಧ್ಯೆಯೂ ಹಗಲಿರುಳೆನ್ನದೆ ಶ್ರಮಿಸಿದರ ಫಲವಾಗಿ ಇಂದು ಸಂಸ್ಥೆ ಗಟ್ಟಿಯಾಗಿ ನೆಲೆಯೂರಿದೆ.
ಹೋಟೆಲ್ ಉದ್ಯಮದತ್ತ: ಪೆಗ್ಸ್ ಅಂಡ್ ಕೆಗ್ಸ್ ಶುಚಿ ರುಚಿಗೆ ಹೆಸರಾಗಿದ್ದು, ಸಾವಿರಾರು ಗ್ರಾಹಕರು ರೆಸ್ಟೋರೆಂಟ್‌ಗೆ ಮಾರು ಹೋಗಿದ್ದಾರೆ. ಇದೀಗ ಯೂ ಡಿಜಿಟಲ್ ಎಂಬ ಹೆಸರಿನಲ್ಲಿ ತಮ್ಮದೇ ಸ್ವಂತ ಕೇಬಲ್ ಉದ್ಯಮ ಆರಂಭಿಸಿದ್ದಾರೆ. ೬೦೦ ಚಾನೆಲ್‌ಗಳನ್ನು ನೀಡುತ್ತಿ ರುವ ಯೂ ಡಿಜಿಟಲ್, ಮೈಸೂರು, ಚಾಮರಾಜ ನಗರ, ತುಮಕೂರು, ಹಾಸನ, ಸಕಲೇಶಪುರ, ನೆಲಮಂಗಲ, ಚನ್ನರಾಯಪಟ್ಟಣ, ಹೊಳೆನರಸೀ ಪುರ, ಕೋಲಾರ, ಚಿಂತಾಮಣಿ, ಚಿತ್ರದುರ್ಗ, ಶಿವಮೊಗ್ಗಗಳಲ್ಲಿ ಸೇವೆ ನೀಡುತ್ತಿದೆ. ೨೦೨೧ರ ಆಗಸ್ಟ್ ಗೆ ರಾಜ್ಯದಾದ್ಯಂತ ಕೇಬಲ್ ಸೇವೆ ನೀಡಲಿದೆ.

ಕೃಪೆ: ವಿಜಯ ಕರ್ನಾಟಕ