Tuesday, August 25, 2026

BDA Apartments

Home Front Page ಕಾಲೇಜಿನ ಸೌಲಭ್ಯ ಸದುಪಯೋಗಪಡಿಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು- ಪ್ರೊ.ಅಬ್ದುಲ್ ರಹಿಮಾನ್

ಕಾಲೇಜಿನ ಸೌಲಭ್ಯ ಸದುಪಯೋಗಪಡಿಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು- ಪ್ರೊ.ಅಬ್ದುಲ್ ರಹಿಮಾನ್

ಮೈಸೂರು, ಆಗಸ್ಟ್ ,20,2025 (www.justkannada.in): ಕಾಲೇಜಿನಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು ಎಂದು ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜು ಪ್ರಾಂಶುಪಾಲ  ಪ್ರೊ.ಅಬ್ದುಲ್ ರಹಿಮಾನ್ ಎಂ  ನುಡಿದರು.

ಮಹಾರಾಣಿ ಮಹಿಳಾ ವಿಜ್ಞಾನ ಸ್ವಾಯತ್ತ ಕಾಲೇಜು ಪ್ರಥಮ ಪದವಿಯ ಬಿ.ಸಿ.ಎ ಮತ್ತು ಬಿ.ಎಸ್ಸಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮವನ್ನು ಇಂದು ಮಹಾರಾಜ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಕೃಷ್ಣರಾಜ ಸಭಾ ಮಂಟಪದಲ್ಲಿ ಆಯೋಜಿಸಲಾಗಿತ್ತು.

25 ಕಾಂಬಿನೇಷನ್ ನ 19 ವಿಭಾಗಗಳ ಮುಖ್ಯಸ್ಥರು ತಮ್ಮ ವಿಭಾಗಗಳ ಕುರಿತು ಅಗತ್ಯ ಮತ್ತು ಮೂಲಭೂತ ಮಾಹಿತಿ ನೀಡಿದರು. ಅಧ್ಯಾಪಕರು ಮತ್ತು ಸಂಶೋಧನೆ,  ಸಾಂಸ್ಕೃತಿಕ, ಎನ್.ಎಸ್.ಎಸ್.,ಎನ್.ಸಿ.ಸಿ, ಕ್ರೀಡೆ, ಆಪ್ತ ಸಲಹೆ, ಉದ್ಯೋಗ ಮಾಹಿತಿ ಕೋಶ, ರೇಂಜರ್ಸ್, ಸ್ವಚ್ಛತೆ, ಶಿಸ್ತು, ವಾಚನಾಲಯ, ಗುರುತಿನ ಚೀಟಿ,  ವಿದ್ಯಾರ್ಥಿ ಕ್ಷೇಮಪಾಲನೆ, ವಿದ್ಯಾರ್ಥಿ ವೇತನ, ಮಹಿಳಾ ದೌರ್ಜನ್ಯ ತಡೆ, ವಿಜ್ಞಾನ ಸಮಿತಿ, ಕಚೇರಿ ನಿರ್ವಹಣೆ  ಕೋಶ ಮತ್ತು ಇತರೆ ಹಲವು ಸಮಿತಿಗಳ ಕುರಿತು ಮಾಹಿತಿಯನ್ನು ಸಂಬಂಧಿಸಿದ ಸಂಚಾಲಕರು ವಿವರವಾಗಿ ಮಂಡಿಸಿದರು.

ಪರೀಕ್ಷೆ ವಿಭಾಗದ ಮುಖ್ಯಸ್ಥ ಡಾ. ತೋಯಜಾಕ್ಷ ಮತ್ತು ಉಪ ಮುಖ್ಯಸ್ಥ ಡಾ. ಸಂತೋಷ ಕುಮಾರ್ ಬಿ.ಎನ್. ಅವರು ಪರೀಕ್ಷೆ ವಿಭಾಗದ ಪ್ರಾಮುಖ್ಯತೆ, ಪ್ರಶ್ನೆ ಪತ್ರಿಕೆ ತಯಾರಿ, ನಿರ್ವಹಣೆ, ರೀತಿ ಬಗ್ಗೆ ವಿವರವಾಗಿ ಪ್ರಸ್ತುತ ಪಡಿಸಿದರು.

ಕಚೇರಿ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ನಡುವೆ ನಡೆಯುವ ಕರ್ತವ್ಯ ಮತ್ತು ಮಹತ್ವದ ಕುರಿತು ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್ ವಿವರಿಸಿದರು.

ಮಹಾರಾಜ ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ .ಮಹೇಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ.ನಂದಕುಮಾರ್ ವಿ ಸ್ವಾಗತಿಸಿದರು, ಕಾರ್ಯಕ್ರಮದಲ್ಲಿ ಡಾ. ಶ್ರೀಪಾದ್ ಅವರು, ಕನ್ನಡ ಸಹ ಪ್ರಾಧ್ಯಾಪಕ ಡಾ. ಸಿದ್ದೇಗೌಡ ಎಸ್,  ಸಹ ಪ್ರಾಧ್ಯಾಪಕ ಡಾ.ಪೃಥ್ವಿರಾಜ್, ಪ್ರವೇಶಾತಿ ಸಮಿತಿಯ ಸಂಚಾಲಕ ಡಾ.ನಟರಾಜ್ ಕೆ, ಡಾ.ರವಿಶಂಕರ್ ಡಿ, ಪತ್ರಾಂಕಿತ ವ್ಯವಸ್ಥಾಪಕಿ ಮೀನಾಕ್ಷಿ ಆರ್, ಮಹಾರಾಜ ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ .ಮಹೇಶ್ ಉಪ್ಥಿತರಿದ್ದರು.

Key words: Mysore, women, collage, All, Prof. Abdul Rahman