ಮೈಸೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಹಿಳೆ ಸಾವು….

ಮೈಸೂರು,ಆ,31,2019(www.justkannada.in): ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸುರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ವರುಣ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ವರುಣ ಗ್ರಾಮದ ಗೌರಮ್ಮ(60 ) ಮೃತಮಹಿಳೆ. ಗೌರಮ್ಮ ವರುಣ ಗ್ರಾಮದ ರಾಜಶೇಖರ ಆರಾಧ್ಯ ಎಂಬುವರ ಪತ್ನಿಯಾಗಿದ್ದು ಇಂದು ಮಧ್ಯಾಹ್ನ ಬಾಳೆ ತೋಟದಲ್ಲಿ ಹುಲ್ಲು ತರಲು ಹೋದ ಸಂದರ್ಭದಲ್ಲಿ ಈ  ಘಟನೆ ನಡೆದಿದೆ.

ಕಳೆದ ಮೂರ್ನಾಲ್ಕು ವರ್ಷದಿಂದ ವಿದ್ಯುತ್ ತಂತಿ ಬದಲಾವಣೆ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಗ್ರಾಮಸ್ಥರ ಮನವಿಗೆ ಕೆ.ಇ.ಬಿ ಇಲಾಖೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ವರುಣ ಗ್ರಾಮದ ಎ.ಇ. ಹಾಗೂ ಅ.ಇ.ಇ.ಗಳ  ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ವರುಣ ಠಾಣಾ ಪೋಲಿಸರು ಆಗಮಿಸಿ ಪರಿಶೀಲಿಸಿದರು. ಈ ಕುರಿತು ವರುಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore-  Woman- dies – falling – power line