Saturday, September 5, 2026

BDA Apartments

Home Crime ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮನೆಗಳ ಮುಂದೆ ಅಳವಡಿಸಿದ್ದ ನೀರಿನ ಮೀಟರ್ ಕಳ್ಳತನ

ಮೈಸೂರು,ಮಾರ್ಚ್,3,2026 (www.justkannada.in): ಮೈಸೂರು ನಗರದ 50ನೇ ವಾರ್ಡ್‌ನ ಬೆಸ್ತಕೇರಿ ಪ್ರದೇಶದಲ್ಲಿ ನೀರಿನ ಮೀಟರ್ ಕಳ್ಳತನ ಪ್ರಕರಣಗಳು ಮುಂದುವರಿದಿವೆ. ಇಂದು ಬೆಳಗಿನ ಜಾವ ಮೂರು 2 ಮನೆಗಳ ಮುಂದೆ ಕಾಂಪೌಂಡ್ ಬಳಿ ಅಳವಡಿಸಲಾಗಿದ್ದ ನೀರಿನ ಮೀಟರ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಸ್ಥಳೀಯ ನಿವಾಸಿಗಳ ಮಾಹಿತಿ ಪ್ರಕಾರ, ಕಳೆದ ವಾರವೂ ಇದೇ ಪ್ರದೇಶದ ಒಂದು ಮನೆಯಲ್ಲಿ ಮೀಟರ್ ಕಳ್ಳತನ ನಡೆದಿತ್ತು. ಇದೀಗ ಮತ್ತೆ 2 ಮನೆಗಳಲ್ಲಿ ಈ ರೀತಿಯ ಕಳ್ಳತನ ನಡೆದಿರುವುದು ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಮನೆಗಳ ಮುಂದೆ ಅಳವಡಿಸಲಾಗಿದ್ದ ಮೀಟರ್‌ ಗಳನ್ನು ಉದ್ದೇಶಪೂರ್ವಕವಾಗಿ ತೆಗೆಯಲಾಗಿದ್ದು, ಕಳ್ಳರು ಪರಾರಿಯಾಗಿದ್ದಾರೆ. ಈ ಘಟನೆಗಳಿಂದ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಮನೆಯ ನಿವಾಸಿಗಳು ಹತ್ತಿರದ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ  ದೂರು ನೀಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸುವಂತೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ರಾತ್ರಿ ವೇಳೆ ಗಸ್ತು ತಿರುಗುವಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Key words: Mysore, Water meters, houses, stolen