Thursday, July 30, 2026

BDA Apartments

Home Front Page ಡಾ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ನಾನು ಬೆಂಬಲಿಸುವೆ: ಸಂಸದ ಪ್ರತಾಪ್ ಸಿಂಹ

ಡಾ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ ನಾನು ಬೆಂಬಲಿಸುವೆ: ಸಂಸದ ಪ್ರತಾಪ್ ಸಿಂಹ

 

ಮೈಸೂರು, ಸೆ.24, 2021 : (www.justkannada.in news ) ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾ ವಿಷ್ಣುವರ್ಧನ್ ಉದ್ಯಾನವನಕ್ಕೆ ಅಧಿಕೃತವಾಗಿ ಡಾಕ್ಟರ್ ವಿಷ್ಣು ಹೆಸರು ನಾಮಕರಣ ಮಾಡಬೇಕು ಹಾಗೆಯೇ ಡಾ॥ ವಿಷ್ಣು ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಸಂಸದ ಪ್ರತಾಪ್ ಸಿಂಹಗೆ ವಿಷ್ಣು ಸೇನಾ ಸಮಿತಿ ಸದಸ್ಯರು ಮನವಿ ಸಲ್ಲಿಸಿದರು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಸಂಸದ ಪ್ರತಾಪ್ ಹೇಳಿದಿಷ್ಟು..

ಕನ್ನಡ ಚಿತ್ರರಂಗದ ಸಾಹಸಸಿಂಹ ಡಾ. ವಿಷ್ಣುವರ್ಧನ್ ರವರ ಕೊಡುಗೆ ಅಪಾರ. ಮೈಸೂರಿನಲ್ಲಿಯೇ ಅವರ ಬಹುತೇಕ ಚಿತ್ರಗಳು ಚಿತ್ರೀಕರಣವಾಗಿವೆ. ವರನಟ ಡಾ. ರಾಜಕುಮಾರ್ ಮತ್ತು ಸಾಹಸಸಿಂಹ ವಿಷ್ಣುವರ್ಧನ್ ರವರು ಕನ್ನಡ ಚಿತ್ರರಂಗದ ಕಣ್ಣುಗಳಿದ್ದಂತೆ. ಇದಕ್ಕೆ ನಿದರ್ಶನವಂತೆ ಅರಮನೆ ಮುಂಭಾಗ ಇಬ್ಬರ ಪ್ರತಿಮೆ ಮತ್ತು ಇಬ್ಬರ ಹೆಸರಿನಲ್ಲಿ ಉದ್ಯಾನವಿದೆ,

ಪುಟ್ಟಣ್ಣ ಕಣಗಾಲ್ ರ ಗರಡಿಯಲ್ಲಿ ಪಳಗಿದ ವಿಷ್ಣುವರ್ಧನ್, ಅಂಬರೀಷ್ ಇಬ್ಬರು ಮೈಸೂರಿನವರು ಎಂಬುದು ನಮಗೆ ಹೆಮ್ಮೆ , ಮೈಸೂರಿನ ಅರಮನೆ ಮುಂಭಾಗದ ಉದ್ಯಾನಕ್ಕೆ ಡಾ. ವಿಷ್ಣುವರ್ಧನ್ ರವರ ಹೆಸರಿಡುವಂತೆ ಮತ್ತು ಅವರ ಪ್ರತಿಮೆಯನ್ನ ಸ್ಥಾಪಿಸುವಂತೆ ಅಭಿಮಾನಿಗಳ ಹೋರಾಟದೊಂದಿಗೆ ಒಬ್ಬ ಸಂಸದನಾಗಿ ನಾನು ಬೆಂಬಲಿಸುವೆ. ಈ ಸಂಬಂಧ ಮೇಯರ್ ಸುನಂದ ಪಾಲನೇತ್ರ ರ ಜತೆ ಚರ್ಚಿಸಿ ನಾಮಕರಣ ಹಾಗೂ ಪ್ರತಿಮೆ ಸ್ಥಾಪನೆ ಸಂಬಂಧ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು.

ಈ ವೇಳೆ ನಗರಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ವಿಷ್ಣು ಸೇನಾ ಸಮಿತಿಯ ಗೌರವಾಧ್ಯಕ್ಷ ವಿಕ್ರಮ ಅಯ್ಯಂಗಾರ್ ,ಉಪಾಧ್ಯಕ್ಷ ಹರೀಶ್ ನಾಯ್ಡು , ಕೇಬಲ್ ಮಹೇಶ್,ಪ್ರದೀಪ್ ಕುಮಾರ್ ,ಉಮೇಶ್ ಕುಮಾರ್ ,ಹಾಗೂ ಇನ್ನಿತರರು ಹಾಜರಿದ್ದರು.

key words : mysore-vishnuvardhan-mp-prathap-simha-park-mcc