ಮುಡಾ (MUDA) ದಿಂದ ಗುಂಪು ವಸತಿ ಮನೆಗಳ ಡಿಮ್ಯಾಂಡ್ ಸರ್ವೆಗೆ ಮೊಬೈಲ್ ಆ್ಯಪ್ ..!

 

ಮೈಸೂರು, ಸೆ.08, 2021 : (www.justkannada.in news) ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಸಾರ್ವಜನಿಕರ ಅಭಿಪ್ರಾಯ, ಬೇಡಿಕೆ ಹಾಗೂ ಇಚ್ಚೆಯ ಆಧಾರದ ಮೇಲೆ ಗುಂಪು ವಸತಿ ಮನೆಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು ಈ ಕಾರಣದಿಂದ ಸಾರ್ವಜನಿಕರಿಂದ ಮನೆ ಬೇಡಿಕೆ ಸಮೀಕ್ಷೆಗೆ ‘ಮೊಬೈಲ್ ಆ್ಯಪ್ ‘ ಸಿದ್ಧಪಡಿಸಿದೆ.

ಮನೆಗಳನ್ನು ನಿರ್ಮಿಸಿ, ವಸತಿ ರಹಿತರಿಗೆ ಹಂಚಿಕೆ ಮಾಡಲು ಉದ್ದೇಶಿಸಿರುವ ಮುಡಾ (MYSORE URBAN DEVELOPMENT AUTHORITY-MUDA ), ಪ್ರಾಧಿಕಾರದಿಂದ ರಚಿತವಾದ ಬಡಾವಣೆಗಳಾದ ವಿಜಯನಗರ ಮತ್ತು ದಟ್ಟಗಳ್ಳಿ ಬಡಾವಣೆಯಲ್ಲಿ ಎರಡು ಕೊಠಡಿ ಮನೆಗಳು ಹಾಗೂ ಸಾತಗಳ್ಳಿ ಬಡಾವಣೆಗಳಲ್ಲಿ ಒಂದು ಕೊಠಡಿಯ 14 ಅಂತಸ್ತಿನ 1960 ವಸತಿ ಸಮುಚ್ಚಯಗಳನ್ನು 450.00 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿದೆ.

ಸದರಿ ಗುಂಪು ವಸತಿ ಮನೆಗಳನ್ನು ನಿರ್ಮಾಣ ಮಾಡಲು ಸಾರ್ವಜನಿಕರಿಂದ ಅಭಿಪ್ರಾಯವನ್ನು ಪಡೆದು, ಅವರ ಬೇಡಿಕೆ ಹಾಗೂ ಇಚ್ಚೆಯ ಆಧಾರದ ಮೇಲೆ ಮನೆಯನ್ನು ನಿರ್ಮಿಸಲು MUDA ಉದ್ದೇಶಿಸಿದೆ. ಈ ಕಾರಣದಿಂದ ಸಾರ್ವಜನಿಕರಿಂದ ಮನೆ ಬೇಡಿಕೆ ಸಮೀಕ್ಷೆ ಕೈಗೊಳ್ಳಲಾಗಿದೆ.

ಸದರಿ ಬೇಡಿಕೆ ಸಮೀಕ್ಷೆಯಲ್ಲಿ ಸುಮಾರು 22 ವಿವಿಧ ಅಂಶಗಳನ್ನು ಸಾರ್ವಜನಿಕರಿಂದ ಸಂಗ್ರಹಿಸಿ ಅದರ ಆಧಾರದ ಮೇಲೆ ಮನೆಯ ವಿನ್ಯಾಸ ಅಂತಿಮಗೊಳಿಸಿ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುವುದು. ಸಾರ್ವಜನಿಕರು ತಮಗೆ ಯಾವ ರೀತಿ ಮನೆ ವಿನ್ಯಾಸ ಅಗತ್ಯವಿದೆ ಎಂಬ ಬಗ್ಗೆ ಸಮೀಕ್ಷೆಯಲ್ಲಿ ನೋಂದಾಯಿಸಿಕೊಂಡು ನಮೂದಿಸಲು ಕೋರಿದೆ.

ಬೇಡಿಕೆ ಸಮೀಕ್ಷೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಗುವ ಆಸಕ್ತಿಯನ್ನಾಧರಿಸಿ ಇನ್ನು ಹೆಚ್ಚಿನ ಮನೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಬೇಡಿಕೆ ಸಮೀಕ್ಷೆಯಲ್ಲಿ ಆನ್‌ಲೈನ್‌ (ವೆಬ್‌ಸೈಟ್ ಹಾಗೂ ಮೊಬೈಲ್ ಆಪ್) ಮೂಲಕ ಮತ್ತು ಆಫ್‌ಲೈನ್ ಮೂಲಕ ಭಾಗವಹಿಸಬಹುದಾಗಿದೆ ಎಂದು ಮುಡಾ (MYSORE URBAN DEVELOPMENT AUTHORITY-MUDA ) ಆಯುಕ್ತ ಡಾ.ನಟೇಶ್ ಮಾಹಿತಿ ನೀಡಿದ್ದಾರೆ.

ENGLISH SUMMARY…

Mobile app to survey the demand for MUDA Group residences
Mysuru, September 8, 2021 (www.justkannada.in): The Mysore Urban Development Authority (MUDA) has decided to construct group residential houses based on public opinion, demand, and desire. MUDA has developed a Mobile App to conduct a survey, regarding public demand.
The objective of this project is to construct houses and distribute them to those who don’t own houses in Mysuru, by MUDA. Under this project, it is proposed to construct two bhk houses in Vijayanagara and Dattagalli layouts and 1 bhk houses in Satagalli layout. A total number of 1960 houses with 14 floors having 1 bhk is proposed to be constructed at a cost of Rs. 450 crore.
MUDA has developed the app to understand the opinion of the public about the project. This app will collect the opinion of the public about 22 different points, based on which the houses will be constructed. The public is requested to register and participate in the survey and mention what type of houses they require.
More houses will be constructed based on the public interest that emerges through this survey. The public can participate both online (website and mobile app) and offline, according to the information provided by MUDA Commissioner Dr. Natesh.
Keywords: MUDA/ group houses/ public opinion/ survey/ Mobile App

key words : MYSORE URBAN DEVELOPMENT AUTHORITY-MUDA -Group-houses-mobile-app-play-store