‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ’ ಕುರಿತು ವಿಚಾರ ಸಂಕಿರಣ ಉದ್ಘಾಟನೆ.

ಬೆಂಗಳೂರು, ಸೆಪ್ಟಂಬರ್,8,2021(www.justkannada.in): ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದಲ್ಲಿ ಕನ್ನಡ ಕುರಿತು ವಿಚಾರ ಸಂಕಿರಣವನ್ನ ಆಯೋಜಿಸಿದೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವಿಚಾರ ಸಂಕಿರಣವನ್ನ ಗಿಡಕ್ಕೆ ನಿರೇರೆಯುವ ಮೂಲಕ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್ ನಾಗಾಭರಣ, ಎಂಎಲ್ ಸಿ ಹೆಚ್.ವಿಶ್ವನಾಥ್, ಮಾಜಿ ಸಚಿವ ತನ್ವೀರ್ ಸೇಠ್ ಸೇರಿ ಹಲವು ಗಣ್ಯರು ಉದ್ಘಾಟಿಸಿದರು.

ಡಾ. ಗುರುರಾಜ ಕರ್ಜಗಿ  ಅವರು ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಬಗ್ಗೆ, ಕನ್ನಡ ಭಾಷಾ ಕಲಿಕಾ ಅಧಿನಿಯಮ ಅನುಷ್ಠಾನದ ಸಾಧ್ಯತೆಗಳು ಬಗ್ಗೆ ಡಾ. ರೋಹಿಣಾಕ್ಷ ಶಿರ್ಲಾಲು ಅವರು,  ಕನ್ನಡ ಮಾಧ್ಯಮ, ಆಂಗ್ಲ ಮಾಧ್ಯಮ ಶಿಕ್ಷಣ ಹಕ್ಕು ಕಾಯ್ದೆ ಕನ್ನಡದ ಸಾಧ್ಯತೆ ಬಗ್ಗೆ ವಿಶ್ವನಾಥ್ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಸಬಲೀಕರಣ : ಇಂದು-ಮುಂದು ಈ ಬಗ್ಗೆ ಡಾ. ಚಂದ್ರಶೇಖರ ದಾಮ್ಲ ಅವರು ಮಾತನಾಡಲಿದ್ದಾರೆ.

Key words: Kannada -Primary – Secondary Education-seminar-bangalore