Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಮರು ಮೌಲ್ಯಮಾಪನದ ವೇಳೆ ಶೇ.10ಕ್ಕಿಂತ ಹೆಚ್ಚು ಅಂಕಗಳಿಸಿರುವ ಮೈಸೂರು ವಿವಿ ಯುಜಿ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ...

ಮರು ಮೌಲ್ಯಮಾಪನದ ವೇಳೆ ಶೇ.10ಕ್ಕಿಂತ ಹೆಚ್ಚು ಅಂಕಗಳಿಸಿರುವ ಮೈಸೂರು ವಿವಿ ಯುಜಿ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ಮರುಪಾವತಿಗೆ ನಿರ್ಧಾರ..

ಮೈಸೂರು,ಫೆಬ್ರವರಿ,15,2021(www.justkannada.in): ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಶೇಕಡಾ 10ಕ್ಕಿಂತ ಹೆಚ್ಚು ಅಂಕಗಳಿಸಿರುವ ಸ್ನಾತಕ ಪದವಿ (UG) ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನ ಶುಲ್ಕವನ್ನ ಮರುಪಾವತಿಸಲು ಮೈಸೂರು ವಿಶ್ವ ವಿದ್ಯಾನಿಲಯ ನಿರ್ಧರಿಸಿದೆ.

Mysore university- UG students – scored- more than 10 per cent - re-valuatuion-refound

ದಿನಾಂಕ: 29-01-2021  ರಂದು ನಡೆದ ಸಿಂಡಿಕೇಟ್ ಸಭೆಯ ನಿರ್ಣಯದಂತೆ, ಮೊದಲನೇ ಫಲಿತಾಂಶಕ್ಕಿಂತ ಮರುಮೌಲ್ಯಮಾಪನ (UG) ವಿದ್ಯಾರ್ಥಿಗಳಿಗೆ ಮರುಮೌಲ್ಯಮಾಪನಕ್ಕಾಗಿ ಪಾವತಿಸಿರುವ ಪೂರ್ಣ ಶುಲ್ಕವನ್ನು ಮರುಭರಿಕೆ (Refund) ಮಾಡಲಾಗುವುದು. ಈ ಸಂಬಂಧ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ ವ್ಯಾಸಂಗ ಮಾಡಿದ ಕಾಲೇಜಿನ ಮುಖಾಂತರ ಈ ಕಛೇರಿಗೆ ಕಳುಹಿಸಿಕೊಡಬೇಕು.Mysore university- UG students – scored- more than 10 per cent - re-valuatuion-refound

ಅರ್ಜಿಯೊಂದಿಗೆ ಮರುಮೌಲ್ಯಮಾಪನಕ್ಕಾಗಿ ಶುಲ್ಕ ಪಾವತಿಸಿರುವ ಮೂಲ ಚಲನ್ ಅಥವಾ ಆನ್ ಲೈನ್ ಮುಖಾಂತರ ಶುಲ್ಕ ಪಾವತಿಸಿದಲ್ಲ, ಹಣ ಪಾವತಿಸಿರುವ ಬಗೆಗಿನ ಮುದ್ರಿತ ದೃಢೀಕೃತ ಪ್ರತಿಯನ್ನು ಲಗತ್ತಿಸಬೇಕು ಎಂದು ಪರೀಕ್ಷಾಂಗ ಉಪಕುಲಸಚಿವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Key words: Mysore university- UG students – scored- more than 10 per cent – re-valuatuion-refound