ಎಲ್ಲಾ ವಿಭಾಗಗಳಲ್ಲಿ ಮಹನೀಯರ ಸಂದೇಶ ಇರಲಿ: ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್

 

ಮೈಸೂರು, ಸೆ.13, 2021 : (www.justkannada.in news) ಎಲ್ಲಾ ವಿಭಾಗಗಳಲ್ಲಿ ಮಹನೀಯರ ಸಂದೇಶವನ್ನು ಅಳವಡಿಸಿದರೆ ವಿದ್ಯಾರ್ಥಿಗಳಿಗೆ ಪ್ರೇರಣೆ ಸಿಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಭಿಪ್ರಾಯ ಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಮಾನಸ ಗಂಗೋತ್ರಿ ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ನಡೆದ ಶೈಕ್ಷಣಿಕ ಮೊಗಸಾಲೆಯ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೇಳಿದಿಷ್ಟು…

ಯಾವುದೇ ವಿಭಾಗವಿರಲಿ ಅದು ಇನ್ನೋವೇಷನ್ ಕೆಲಸ ಮಾಡಬೇಕು. ಇದಕ್ಕೆ ಸಮಾಜ ಕಾರ್ಯ ವಿಭಾಗ ಮಾದರಿಯಾಗಿದೆ. ವಿದ್ಯಾರ್ಥಿಗಳು ಕಾರಿಡಾರ್ ಗೆ ಬಂದಾಗ ಈ ಸೂಕ್ತಿ ಹೊಸ ಚೈತನ್ಯ ಉಂಟು ಮಾಡುತ್ತವೆ. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳು ನಿರ್ಮಾಣ‌ ಮಾಡಬೇಕಾದರೆ ಮಹನೀಯರ ಸಂದೇಶ ಅಗತ್ಯವಾಗಿ ಬೇಕು. ಇಲ್ಲಿ ಕುವೆಂಪು ಅವರಿಂದ ಹಿಡಿದು ಬುದ್ಧನವರೆಗೆ ದಾಶರ್ನಿಕರ ಸಂದೇಶ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವುದರಲ್ಲಿ ಎರಡು ಮಾತಿಲ್ಲ. ಇದನ್ನೇ ಮಾಡೆಲ್ ಆಗಿ ಇಟ್ಟು ಕೊಂಡು ಎಲ್ಲಾ ವಿಭಾಗಗಳಲ್ಲಿ ಈ ಕಾರ್ಯ ಆಗಲಿ. ವಿದ್ಯಾರ್ಥಿಗಳು ಪಾಠದ ಜೊತೆಗೆ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಆಶಿಸಿದರು.

ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ ಮಾತನಾಡಿ,

ಶಿಕ್ಷಕರು ಯಾವುದೋ ಕಾಲಘಟ್ಟದಲ್ಲಿ ಹೇಳಿದ ಮಾತು, ಮತ್ಯಾವುದೋ ಸಮಯದಲ್ಲಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಪರಿಕಲ್ಪನೆಯ ಹಾಗೂ ಸಾರ್ವತಿಕವಾಗಿ ಸದಾ ಕಾಲಕ್ಕೂ ಸಲ್ಲುವ ಹೇಳಿಕೆಗಳನ್ನು ಶೈಕ್ಷಣಿಕ ಮೊಗಸಾಲೆಯಲ್ಲಿ ದಾಖಲಿಸಲಾಗಿದೆ ಎಂದರು‌.

14 ಜನರ ಮಹನೀಯರ ಚಿತ್ರ ಸಹಿತ ಸಂದೇಶವನ್ನು ಇಂದು ಅನಾವರಣಗೊಳಿಸಲಾಗಿದೆ‌. ಸ್ವಾಮಿ ವಿವೇಕಾನಂದ, ನೆಲ್ಸನ್ ಮಂಡೇಲಾ, ಬುದ್ಧ, ಮಹಾತ್ಮ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್ ನಾಲ್ವಡಿ ಕೃಷ್ಣರಾಜ ಒಡೆಯರ್ ಕುವೆಂಪು, ಅಬ್ದುಲ್ ಕಲಾಂ, ಬಸವಣ್ಣ, ದೇವನೂರು ಮಹಾದೇವ ಅವರ ಸಂದೇಶ ಇದೆ. ಈ ಬೌದ್ಧಿಕತೆಯ ಬೆಳಕಿನ ದಾರಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಸೆಲೆಯಾಗುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.

ಮೈಸೂರು ವಿವಿಗೆ ದೂರದೃಷ್ಟಿ ಇರುವ ಕುಲಪತಿಯಾದ ಪ್ರೊ. ಜಿ.ಹೇಮಂತ್ ಕುಮಾರ್ ಅವರು ಸಿಕ್ಕಿರುವುದು ನಮ್ಮ ಅದೃಷ್ಟ. ಅವರ ಅವಧಿಯಲ್ಲಿ ಸಾಕಷ್ಟು ಕೆಲಸ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಸಿ.ನಾಗಣ್ಣ, ಡಾ.ಆರ್.ನಾಗರಾಜು, ಪ್ರೊ.ಕೆ.ಕಾಳಚನ್ನೇಗೌಡ, ಹಿರಿಯ ಗಾಂಧಿವಾದಿ ಕೆ.ಟಿ.ವೀರಪ್ಪ , ಡಾ.ವಸಂತ ಕುಮಾರ್ ತಿಮಕಾಪುರ, ಪ್ರೊ.ವಸಂತಮ್ಮ, ಡಾ.ವೈ.ಡಿ.ರಾಜಣ್ಣ, ಸಮಾಜಕಾರ್ಯ ಅಧ್ಯಯನ ವಿಭಾಗದ ಡಾ.ಎಚ್.ಸಿ.ಜ್ಯೋತಿ, ಸಹ ಪ್ರಾಧ್ಯಾಪಕ ಡಾ.ಚಂದ್ರಮೌಳಿ ಸೇರಿದಂತೆ ಇತರರು ಹಾಜರಿದ್ದರು.

key words : mysore-university-sociology-department-UOM-vc-hemanth.kumar