ಮೈಸೂರು ವಿವಿ ಕುಲಸಚಿವ ಪ್ರೊ.ಆರ್. ಶಿವಪ್ಪ ವರ್ಗಾವಣೆಗೆ ಮತ್ತೆ ತಡೆ ನೀಡಿದ ಹೈಕೋರ್ಟ್.

ಬೆಂಗಳೂರು,ಡಿಸೆಂಬರ್,14,2021(www.justkannada.in):  ಮೈಸೂರು ವಿಶ್ವವಿದ್ಯಾನಿಲಯ ಆಡಳಿತ ವಿಭಾಗದ ಕುಲಸಚಿವ ಪ್ರೊ.ಆರ್. ಶಿವಪ್ಪ ಅವರ ವರ್ಗಾವಣೆಗೆ ಹೈಕೋರ್ಟ್ ಮತ್ತೆ ತಡೆಯಾಜ್ಞೆ ನೀಡಿದೆ.

ಪ್ರೊ.ಆರ್. ಶಿವಪ್ಪ ಅವರು 2019 ರ ಸೆಪ್ಟೆಂಬರ್ ನಲ್ಲಿ ಅವರು ಕುಲಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ನಂತರ ನವೆಂಬರ್ ನಲ್ಲಿ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಪ್ರಶ್ನಿಸಿ, ಶಿವಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದರು.  ಆ ವೇಳೆ ತಡೆಯಾಜ್ಞೆ ಸಿಕ್ಕಿದ್ದರಿಂದ ಆರ್ .ಶಿವಪ್ಪ ಕುಲಸಚಿವರಾಗಿ ಮುಂದುವರಿದ್ದರು.

ಈಗ ಮತ್ತೆ ಡಿಸೆಂಬರ್.3ನೇ ದಿನಾಂಕ ನಮೂದಿಸಿ ಅವರನ್ನು ಮಾತೃ ವಿಭಾಗಕ್ಕೆ (ಮಾನಸ ಗಂಗೋತ್ರಿ ಸಮಾಜ ಕಾರ್ಯ) ವರ್ಗಾಯಿಸಲಾಗಿತ್ತು. ಆದರೆ ಈ ಆದೇಶ ಡಿಸೆಂಬರ್.9 ರಂದು ಶಿವಪ್ಪ ಅವರಿಗೆ ತಲುಪಿತ್ತು.  ಮರುದಿನವೇ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.Maharaja College,Roof ceiling,fall,place,Mysore VV,Registrar,Prof.R.Shivappa

ಇದೀಗ ಡಿಸೆಂಬರ್ 13 ರಂದು ಹೈಕೋರ್ಟ್ ವರ್ಗಾವಣೆಗೆ ತಡೆಯಾಜ್ಞೆ ನೀಡಿದೆ. ಹಿಂದಿನ ವರ್ಗಾವಣೆ ಸ0ಬ0ಧ ತಡೆಯಾಜ್ಞೆ ನೀಡಿ, ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗಿ ತಮ್ಮ ನಿಲುವು ತಿಳಿಸಿಲ್ಲ. ಹೀಗಿದ್ದರೂ ಮತ್ತೆ ವರ್ಗಾವಣೆ ಮಾಡಲಾಗಿದೆ ಎಂದು ಆಕ್ಷೇಪಿಸಿ ಶಿವಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು.

Key words: Mysore university- Registrar -Prof.R. Shivappa -High Court –stay- transfer.