ಮೈಸೂರು,ಮೇ,22,2025 (www.justkannada.in): ಸಂಶೋಧನಾ ಪ್ರವೇಶಾತಿಗಾಗಿ ಆಗ್ರಹಿಸಿ ಮೈಸೂರು ವಿಶ್ವ ವಿದ್ಯಾನಿಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ಮೈಸೂರು ವಿ.ವಿ ಆಡಳಿತ ಕಚೇರಿ ಮುಂಭಾದ ಸಂಶೋಧನಾಕಾಂಕ್ಷಿ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಮೈಸೂರು ವಿ.ವಿಯಲ್ಲಿ ಖಾಯಂ ಉಪನ್ಯಾಸಕ ಕೊರತೆಯಿಂದಾಗಿ ಸಂಶೋಧನೆ ಸಮರ್ಪಕವಾಗಿ ನಡೆಯುತ್ತಿಲ್ಲ. ಹೀಗಾಗಿ ಸಂಶೋಧನೆಗೆ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಬೀದಿ ಪಾಲಾಗಿದ್ದಾರೆ.
ಈಗಾಗಲೇ ಇರುವಂತ ಖಾಯಂ ಉಪನ್ಯಾಸಕರು, ಪ್ರಾಧ್ಯಾಪಕರ ಬಳಿ ಅಗತ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಸಂಶೋಧನಾ ವಿದ್ಯಾರ್ಥಿಗಳಾಗಿ ಸೇರ್ಪಡೆಯಾಗಿದ್ದಾರೆ. ಸಾಕಷ್ಟು ಅರ್ಹತೆ, ಸಾಮರ್ಥ್ಯ ಇದ್ದರೂ ಸಂಶೋಧನೆಗೆ ಅವಕಾಶ ಸಿಗದೆ ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ನಮಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಲೇ ಬೇಕು ಅಲ್ಲಿವರೆಗೂ ನಾವು ಪ್ರತಿಭಟನಾ ಧರಣಿಯಿಂದ ಹಿಂದೆ ಸರಿಯಲ್ಲ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ.
Key words: Mysore University, protest, research, students