ಸಂಶೋಧನಾ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್  ಭರವಸೆ ನೀಡಿದ ಸಚಿವ ಶ್ರೀರಾಮುಲು

ಮೈಸೂರು,ನವೆಂಬರ್, 26,2020(www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಸದ್ಯದಲ್ಲೇ ಲ್ಯಾಪ್ ಟಾಪ್ ನೀಡಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಆಶ್ವಾಸನೆ ನೀಡಿದರು.mysore-university-laptap-sc-st-student-minister-sriramlu

ಸಂವಿಧಾನದ ದಿನದ ಅಂಗವಾಗಿ ಮೈಸೂರು ವಿಶ್ವ ವಿದ್ಯಾನಿಲಯದ ಡಾ.ಅಂಬೇಡ್ಕರ್ ಸಂಶೋಧನಾ ಕೇಂದ್ರದ ವತಿಯಿಂದ ಇಂದು ಆಯೋಜಿಸಿದ್ಧ ಸಮಾರಂಭದಲ್ಲಿ ಭಾಗವಹಿಸಿ ಸಚಿವ ಶ್ರೀರಾಮುಲು ಮಾತನಾಡಿದರು.

ಕಳೆದ ಎರಡು ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡುವ ಯೋಜನೆ ನೆನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಶ್ರೀರಾಮಲು, ಅಂದಾಜು 300 ಸಂಶೋಧನೆ ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದು, ಈ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ತಗಲುವ ಅಂದಾಜು ವೆಚ್ಚ 1.25 ಕೋಟಿ ರೂ.ಗಳನ್ನು ಕೂಡಲೇ ಮಂಜೂರು ಮಾಡಲು ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ಆಶ್ವಾಸನೆ ನೀಡಿದರು.mysore-university-laptap-sc-st-student-minister-sriramlu

ಇದೇ ವೇಳೆ ವಿಶ್ವವಿದ್ಯಾನಿಲಯದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ 2 ಕೊಟಿ ಅನುದಾನ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಕ್ರಮವಹಿಸುತ್ತೇನೆ ಎಂದರು.

ರಾಜಕಾರಣಿಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಬಳಕೆ ಮಾಡಿಕೊಂಡು ನಂತರ ಅವರ ವಿಚಾರಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಟೀಕಿಸಿದರು.

ಬಹಳಷ್ಟು ಮಂದಿ ಅಂಬೇಡ್ಕರ್ ಮತ್ತು ಅವರ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ರಾಜಕೀಯ ಸ್ಥಾನ ಪಡೆಯುತ್ತಾರೆ. ಆದರೆ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್ ವಿಚಾರಗಳನ್ನು ಗಾಳಿಗೆ ತೂರುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಬೇಡ್ಕರ್ ಅವರನ್ನು ಜ್ಞಾನದ ದೀಪ ಎಂದಿದ್ದಾರೆ. ತಾವು ಪ್ರಧಾನಿಯಾಗಿರಲು ಅಂಬೇಡ್ಕರ್ ಅವರೇ ಕಾರಣ ಎಂದು ಹೇಳಿದ್ದಾರೆ. ಮಾತ್ರವಲ್ಲದೆ ಅಂಬೇಡ್ಕರ್ ಅವರನ್ನು ವಿಶ್ವದಾದ್ಯಂತ ಸ್ಮರಿಸುವಂತೆ ಮಾಡಿದ್ದಾರೆ ಎಂದರು.

ಸಂವಿಧಾನ ಜಾರಿಯಾಗಿ 71 ವರ್ಷವಾದರೂ ಇಂದಿಗೂ ಗ್ರಾಮಾಂತರ ಪ್ರದೇಶದಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆ. ಬೀದರ್‌ನ ಗ್ರಾಮವೊಂದರಲ್ಲಿ ದಲಿತರ ಮಹಿಳೆಯೊಬ್ಬರು ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದ ಕಾರಣಕ್ಕೆ ಕೆರೆಯ ನೀರನ್ನೇ ಖಾಲಿ ಮಾಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿಯೂ ಅಸಮಾನತೆ ಇದೆ. ಜೀವನ ರೂಪಿಸಿಕೊಳ್ಳಬಹುದಾದ ಶಿಕ್ಷಣ ರೂಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಭಗವದ್ಗೀತೆಯಂತೆ ಸಂವಿಧಾನವನ್ನು ಗೌರವಿಸುವಂತಾಗಬೇಕು. ಪೆರಿಯಾರ್ ಹೇಳಿದಂತೆ ದಲಿತರ ಮನೆಯಲ್ಲಿ ಹಚ್ಚುವ ದೀಪ ವಿಶ್ವಕ್ಕೆ ಬೆಳಕು ನೀಡುವಂತಾಗಬೇಕೆಂದರು.

ಅಂಬೇಡ್ಕರ್ ಅವರು ಹೋರಾಟದ ಮೂಲಕ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ. ಆದರೆ ಇತ್ತೀಚೆಗೆ ಹೋರಾಟಗಳು ಕಡಿಮೆಯಾಗಿವೆ. ಕೇವಲ ಸ್ವಾರ್ಥ, ರಾಜಕೀಯ, ಸ್ವ-ಹಿತಕ್ಕೆ ಹೋರಾಟಗಳು ಬಳಕೆಯಾಗುತ್ತಿವೆ. ಸಂವಿಧಾನ ಜಾರಿಯಾಗಿ ಇಷ್ಟು ವರ್ಷ ಕಳೆದರೂ ಸರಕಾರದ ಸವಲತ್ತುಗಳು ಗ್ರಾಮೀಣ ಮಟ್ಟಕ್ಕೆ ತಲುಪುತ್ತಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಜೆಟ್‌ನಲ್ಲಿ ಕೋಟ್ಯಾಂತರ ರೂ. ಅನುದಾನ ದೊರೆಯುತ್ತಿದೆ. ಆದರೆ ಈ ಅನುದಾನ ಪ್ರಭಾವಿಗಳು, ಮಧ್ಯವರ್ತಿಗಳು, ಅಧಿಕಾರಿಶಾಹಿಗಳ ಪಾಲಾಗುತ್ತಿದೆ. ಇದಕ್ಕೆ ಮತ್ತಷ್ಟು  ಕಾರಣಗಳೇನು ? ನಿಯಂತ್ರಣ ಹೇಗೆ ಎಂಬುದರ ಬಗ್ಗೆ ಸಂಶೋಧನೆಯಾಗಬೇಕಿದೆ.

ರಾಜ್ಯಾದ್ಯಂತ ನಾನು ಪ್ರವಾಸ ಮಾಡಿದ ಸಂದರ್ಭದಲ್ಲಿ ನಾನು ಗಮನಿಸಿದಂತೆ ಭವನಗಳ ಕಾಮಗಾರಿಗಳ ಅರ್ಧಕ್ಕೆ ನಿಂತಿವೆ. ಇಲ್ಲಿ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ. ಭವನಗಳಿದ್ದರೆ ಕಾರ್ಯಕ್ರಮಗಳು ಗುಡಿ ಕೈಗಾರಿಗಳಂತಹ ಕೆಲಸಗಳನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹಿಂದುಳಿದ ಸಮುದಾಯಗಳ ಮೇಲೆ ನಡೆಯುತಿರುವ ದೌರ್ಜನ್ಯ ಪ್ರಕರಣಗಳಿಗೆ ಶಿಕ್ಷೆ ನೀಡುವ ಪ್ರಮಾಣ ಕಡಿಮೆಯಾಗಿದೆ. 10,000 ಪ್ರಕರಣಗಳಲ್ಲಿ ಕೇವಲ ಶೇ. 3 ರಷ್ಟಕ್ಕೆ ಮಾತ್ರ ಶಿಕ್ಷೆಯಾಗಿದೆ. ಅಧಿಕಾರಿಗಳು ಗೋಲ್‌ ಮಾಲ್ ಮಾಡಿ ಮಧ್ಯವರ್ತಿಗಳ ಮುಖಾಂತರ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

English summary….

Minister Sriramulu assures to provide laptops to research students soon
Mysuru, Nov. 26, 2020 (www.justkannada.in): Social Welfare Department Minister, Govt. of Karnataka Sri Sriramulu has assured to provide laptops to SC and ST students who are pursuing research in Mysore University.
He participated in a programme organised by the Dr. Ambedkar Research Center, of Mysore University, held today on the occasion of National Constitution Day.mysore-university-laptap-sc-st-student-minister-sriramlu
In his address Minister Sriramulu observed that distribution of laptops to SC and ST students was pending for the last two years. “There are about 300 students who are pursuing research and measures will be taken to distribute laptops to all of them at the earliest. It will cost a sum of Rs. 1.25 crore and I will give instructions in this regard to the officials concerned immediately,” he said.
Keywords: laptops to SC/STs-Sriramulu-Mysore University-Dr. Ambedkar Research Center

Key words: mysore university- laptap- SC-ST-Student-minister- sriramlu