ಮೈಸೂರು,ಅಕ್ಟೋಬರ್,15,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ ಹಿನ್ನೆಲೆಯಲ್ಲಿ ಸದರಿ ಪ್ರಸ್ತಾವನೆಯನ್ನು ಮತ್ತೊಮ್ಮೆ ಸಿಎಂ ಮುಖ್ಯಮಂತ್ರಿಗಳಿಗೆ, ಉನ್ನತ ಶಿಕ್ಷಣ ಸಚಿವರಿಗೆ ಸಲ್ಲಿಸುವಂತೆಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ಸೂಚಿಸಲಾಯಿತು.
ಇಂದು ನಡೆದ ಮೈಸೂರು ವಿಶ್ವವಿದ್ಯಾನಿಲಯದ ಶಿಕ್ಷಣ ಮಂಡಳಿಯ ಸಾಮಾನ್ಯ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯಕೆ.ವಿವೇಕಾನಂದ ಅವರು ಪಾಲ್ಗೊಂಡು ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.
ಇದೇ ಸಂದರ್ಭದಲ್ಲಿ ಎಂಎಲ್ ಸಿ ಕೆ.ವಿವೇಕಾನಂದ ಅವರು ತನ್ನ ತಂದೆ ಕರಿಗೌಡ ಮತ್ತು ತಾಯಿ ಚಿಕ್ಕತಾಯಮ್ಮ ಅವರ ಹೆಸರಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ದತ್ತಿ ಯೋಜನೆಗೆ 2 ಲಕ್ಷ ರೂ. ಅನುದಾನವನ್ನು ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.
ಸಭೆಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ನೌಕರರ ಪಿಂಚಣಿಗೆ ಅನುದಾನ ಕೊರತೆ ಇರುವುದಾಗಿ ತಿಳಿದುಬಂದಿದ್ದು ಸದರಿ ಪ್ರಸ್ತಾವನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಅವರಿಗೆ ಮತ್ತೊಮ್ಮೆ ಸಲ್ಲಿಸುವಂತೆ ಸಭೆಗೆ ಸೂಚಿಸಲಾಯಿತು. ಕಾಲೇಜುಗಳಿಗೆ ಹೊಸ ಹೊಸ ಕೋರ್ಸ್ ಗಳನ್ನು ಆರಂಭಿಸುವ ಮುನ್ನ ಮೂಲಭೂತ ಸೌಲಭ್ಯವನ್ನು ಪರಿಗಣಿಸಿ ನೀಡುವಂತೆ ಸೂಚನೆ ನೀಡಲಾಯಿತು.
Key words: pension, Mysore University, retired, employees, proposal, MLC K.Vivekanand