Wednesday, September 9, 2026

BDA Apartments

Home Front Page ಮೈಸೂರು ವಿವಿ  ವಿದ್ಯಾರ್ಥಿನಿಲಯದಲ್ಲಿ ದೃಷ್ಟಿದೋಷ, ವಿಶೇಷಚೇತನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಕರ್ಯ

ಮೈಸೂರು ವಿವಿ  ವಿದ್ಯಾರ್ಥಿನಿಲಯದಲ್ಲಿ ದೃಷ್ಟಿದೋಷ, ವಿಶೇಷಚೇತನ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ ಸೌಕರ್ಯ

ಮೈಸೂರು, ಫೆಬ್ರವರಿ 3, 2022 (www.justkannada.in): ಪಿಹೆಚ್‌ಡಿ ಮಾಡುತ್ತಿರುವ ದೃಷ್ಟಿ ದೋಷವಿರುವ ಹಾಗೂ ವಿಶೇಷಚೇತನ ವಿದ್ಯಾರ್ಥಿಗಳಿಗೆ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿನಿಲಯದಲ್ಲಿ ಉಚಿತವಾಗಿ ಊಟ ಮತ್ತು ವಸತಿ ಸೌಕರ್ಯಗಳನ್ನು ಕಲ್ಪಿಸಲು, ಫೆಬ್ರವರಿ ೧, ೨೦೨೨ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಿಂಡಿಕೇಟ್ ಸದಸ್ಯರಾದ ಡಾ. ಚೈತ್ರ ನಾರಾಯಣ ಅವರು ಈ ಪ್ರಸ್ತಾವನೆಯನ್ನು ಸಿಂಡಿಕೇಟ್ ಸಭೆಯಲ್ಲಿ ಮಂಡಿಸಿದರು. ಈ ಪ್ರಸ್ತಾವನೆಯನ್ನು ಉಪಕುಲಪತಿಗಳೂ ಸೇರಿದಂತೆ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅಂಗೀಕರಿಸಿದರು.

ಈ ನಿರ್ಧಾರದಿಂದ ಇಂತಹ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಸಂಶೋಧನೆಯನ್ನು ಕೈಗೊಳ್ಳಲು ಹಾಗೂ ಅವರ ವೃತ್ತಿ ಭವಿಷ್ಯ ನಿರ್ಮಾಣ ಮಾಡಿಕೊಳ್ಳಲು ಬಹಳ ನೆರವಾಗುತ್ತದೆ.

Key words: mysore-university- Hostel-free- meals