ಕೋವಿಡ್ ಲಸಿಕೆ ಅಭಿಯಾನ, ಮೈಸೂರು ವಿವಿಯ 1000 ಮಂದಿಗೆ ಲಸಿಕೆ ಗುರಿ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್.

ಮೈಸೂರು, ಜೂ.21, 2021 : (www.justkannada.in news ) : ಇಂದಿನಿಂದ 18 ರಿಂದ 44 ವರ್ಷದವರಿಗೆ ಉಚಿತ ಲಸಿಕಾ ಅಭಿಯಾನಯಾನಕ್ಕೆ ಚಾಲನೆ ಆರಂಭ.

ಮೈಸೂರು ವಿಶ್ವವಿದ್ಯಾನಿಲಯ ಸಿಬ್ಬಂದಿಗಳ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಸಂಸದ ಪ್ರತಾಪ್ ಸಿಂಹ. ಮೈಸೂರು ವಿವಿಯ ಸೆನೆಟ್ ಭವನದಲ್ಲಿ ನಡೆಯುತ್ತಿರುವ ಅಭಿಯಾನ.

ಸುಮಾರು ಒಂದು ಸಾವಿರ ಮಂದಿ ವಿವಿ ಸಿಬ್ಬಂದಿಗೆ ಕೋವಿಡ್ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ ಎಂದಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕೆಲ ದಿನಗಳ ಹಿಂದೆ ನಡೆದ ಕುಲಪತಿಗಳ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರು ಮಾತನಾಡಿ, ವಿವಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ಕುಲಪತಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದ್ದರು.

ಅದರಂತೆ, ಸಂಸದ ಪ್ರತಾಪ ಸಿಂಹ ಅವರ ಸಹಕಾರದಿಂದ ಇಂದು ಮೈಸೂರು ವಿವಿ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಇದಕ್ಕಾಗಿ ಸಂಸದ ಪ್ರತಾಪಸಿಂಹ ಅವರಿಗೆ ಧನ್ಯವಾದಗಳು ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದರು.  ಲಸಿಕೆ ಪಡೆಯಲು ವಿವಿಯ ನೂರಾರು ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿ ವೃಂದ ಸರದಿ ಸಾಲಿನಲ್ಲಿ ಕಾಯುತ್ತಿದ್ದರು. ಈ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಕುಲಪತಿ ಭರವಸೆ ನೀಡಿದರು.

ಸಮಾರಂಭದಲ್ಲಿ ಕುಲಸಚಿವ ಪ್ರೊ.ಬಿ.ಶಿವಪ್ಪ, ಕುಲಪತಿಗಳ ವಿಶೇಷಾಧಿಕಾರಿ ಡಾ.ಚೇತನ್ ಸೇರಿದಂತೆ ಹಲವರು ಭಾಗಿ.

key words : mysore-university-covid-vaccinatiion-1000-target-vc-hemanth.kumar-UOM