ಮೈಸೂರು,ಸೆಪ್ಟಂಬರ್,15,2025 (www.justkannada.in): ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಟೆಂಡರ್, ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಈ ಬಗ್ಗೆ ಸಿಂಡಿಕೇಟ್ ಸದಸ್ಯರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ರಿಜಿಸ್ಟ್ರಾರ್ ಸವಿತಾ ಸ್ಪಷ್ಟಪಡಿಸಿದರು.
ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್ ಚಂದ್ರಶೇಖರ್ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ, , 2023ರಿಂದ ಸತತವಾಗಿ ಪದೇಪದೇ ಕಾಯ್ದೆಗಳ ಉಲ್ಲಂಘನೆ ಮಾಡಿ ಟೆಂಡರ್ ಹೆಸರಿನಲ್ಲಿ ವಸ್ತುಗಳ ಖರೀದಿ ಮತ್ತು ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಈ ಬಗ್ಗೆ ತಕ್ಷಣವೇ ವಿಶೇಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
ಈ ಬಗ್ಗೆ ಜಸ್ಟ್ ಕನ್ನಡ ಜತೆ ಮಾತನಾಡಿದ ಕುಲಸಚಿವರಾದ ಸವಿತಾ ಹೇಳಿದಿಷ್ಟು…
ಸಿಂಡಿಕೇಟ್ ಸದಸ್ಯರಿಗೆ ಜವಾಬ್ದಾರಿ ಇದೆ. ಅದು ಅದರಂತೆ ವರ್ತಿಸಬೇಕು. ಮಾಡಿರುವ ಆರೋಪಗಳ ಬಗ್ಗೆ ಸಾಕ್ಷಿಯಿದ್ದರೆ ಮಾಹಿತಿ ನೀಡಲಿ. ಅದನ್ನು ಬಿಟ್ಟು ಪ್ರಚಾರಕ್ಕಾಗಿ ಮಾಧ್ಯಮಗಳ ಬಳಿ ಸುಳ್ಳು ಹೇಳಿಕೆ ನೀಡಬಾರದು.
ಟೆಂಟರ್ ಗಳನ್ನು ಕಾಯ್ದೆ ಪ್ರಕಾರವೇ ಕರೆಯಲಾಗಿದೆ. ಒಂದು ವೇಳೆ ಲೋಪವಾಗಿದ್ದರೆ ಇತರೆ ಸಿಂಡಿಕೇಟ್ ಸದಸ್ಯರು ಸುಮ್ಮನಿರುತ್ತಿದ್ದರೆ, ಸರಕಾರ, ಆಡಿಟರ್ ತರಾಟೆಗೆ ತೆಗೆದುಕೊಳ್ಳುತ್ತಿರಲಿಲ್ಲವೆ ಎಂದು ಪ್ರಶ್ನಿಸಿದ ಸವಿತಾ, ನನ್ನ ಅವಧಿಯಲ್ಲಿ ಆಡಳಿತ ವ್ಯವಸ್ಥೆ ಅತ್ಯಂತ ಪಾರದರ್ಶಕವಾಗಿದೆ. ಯಾವುದೇ ಸದಸ್ಯರು , ಯಾವುದೇ ಮಾಹಿತಿ ಕೇಳಿದರು ಅದನ್ನು ಒದಗಿಸಲು ಬದ್ಧ. ಸಮರ್ಪಕವಾಗಿಲ್ಲ ಎಂದೆನಿಸಿದರೆ ರಾಜ್ಯ ಸರಕಾರಕ್ಕೆ, ರಾಜ್ಯಪಾಲರಿಗೆ ಪತ್ರ ಬರೆಯಲು ಅವರು ಅರ್ಹರು. ಅದನ್ಬು ಬಿಟ್ಟು ಪ್ರಚಾರಕ್ಕಾಗಿ ಈ ರೀತಿ ಪದೇ ಪದೇ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ವಿಶ್ವವಿದ್ಯಾನಿಲಯದ ಗೌರವ ಹಾಳು ಮಾಡುವುದು ಸರಿಯಲ್ಲ. ಅವರ ಪ್ರವೃತ್ತಿ ಇದೇ ರೀತಿ ಮುಂದುವರಿದರೆ ಅವರಿಗೆ ನೋಟಿಸ್ ನೀಡಲಾಗವುದು ಎಂದು ಎಚ್ಚರಿಸಿದರು.
key words: No irregularities in tender, purchase, notices, syndicate member, Registrar Savitha, warns, UOM, Mysore University
SUMMARY:
No irregularities in tender, purchase, notices will be issued to syndicate member – Registrar Savitha warns
The tenders have been called as per the law. If there were a lapse and the other syndicate members remained silent, would the government and the auditor not have taken the matter to task, Savita questioned, adding that the administrative system during my tenure was very transparent. If any member asked for any information, was bound to provide it. If he felt that it was not adequate, he was entitled to write a letter to the state government and the governor. It is not right to repeatedly release statements to the media for publicity and tarnish the reputation of the university. She warned that if his trend continued like this, he would be given a notice.