ಮೂವರು ದರೋಡೆಕೋರರನ್ನ ಬಂಧಿಸಿದ ಪೊಲೀಸರು…

ಮೈಸೂರು,ನವೆಂಬರ್,23,2020(www.justkannada.in): ಹೆದ್ದಾರಿ ಕೆಲಸ ಮಾಡುವವರ ಬಳಿ ಹಣ ಮೊಬೈಲ್  ದೋಚಿದ್ಧ ಮೂವರು ಆರೋಪಿಗಳನ್ನ ಮೈಸೂರಿನ ಮೇಟಗಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ.kannada-journalist-media-fourth-estate-under-loss

ಶರತ್(19) ಶರತ್ ಎಂ ಬಿ (20) ಶ್ರೀನಿವಾಸ್ (32) ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಬಳಿ ಇದ್ದ 1 ಬೈಕ್ 2 ಮೊಬೈಲ್ ಅನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

18/11/2020 ರಂದು ಬೆಂಗಳೂರು- ಮೈಸೂರು ರಸ್ತೆಯ ಸಿದ್ಧಲಿಂಗಪುರದ ಶ್ರಿಯ ಕಂಫರ್ಟ್ ಎದುರು ಹೆದ್ದಾರಿ ಕೆಲಸ ಮಾಡುತ್ತಿದ್ದ ಕೆಲಸಗಾರರ ಶೆಡ್ ಗೆ ನುಗ್ಗಿದ್ದ ಬಂಧಿತ ಮೂವರು ಆರೋಪಿಗಳು  ಕೆಲಸಗಾರರ ಬಳಿ ಹಣ ಮೊಬೈಲ್ ದೋಚಿ ಪರಾರಿಯಾಗಿದ್ದರು. ಇದೀಗ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದು, ಈ ಕುರಿತು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೊದಲ ಆರೋಪಿ ಶರತ್ ಈ ಹಿಂದೆ ಸಹಾ ಬೈಕ್ ಕಳ್ಳತನ ಮಾಡಿದ್ದ ಎಂಬ ಆರೋಪವಿದೆ.

Key words: mysore-three –robber- arrested-police