ಮನೆಗಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ್ದ ಆರೋಪಿ ಬಂಧನ: ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನಾಭರಣ ವಶ.

ಮೈಸೂರು,ಅಕ್ಟೋಬರ್,13,2022(www.justkannada.in):  ಮೈಸೂರಿನ ಅಶೋಕಪುರಂ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ  ಮನೆಕಳ್ಳತನ ಹಾಗೂ ಸರಗಳ್ಳತನ ಮಾಡುತ್ತಿದ ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತನಿಂದ ರೂ .18,16,500 ಬೆಳೆಬಾಳುವ 305 ಗ್ರಾಂ ಚಿನ್ನದ ಆಭರಣಗಳು, 1200 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ಮತ್ತು ಒಂದು ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರು ನಗರದ ಅಶೋಕಪುರಂ ಪೊಲೀಸ್ ಠಾಣಾಯಲ್ಲಿ ದಾಖಲಾಗಿದ್ದ ಕನ್ನಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿ ಮತ್ತು ಮಾಲು ಪತ್ತೆಗಾಗಿ ಕೃಷ್ಣರಾಜ ವಿಭಾಗದ ಅಪರಾಧ ಪತ್ತೆದಳ ಹಾಗೂ ಅಶೋಕಪುರಂ ಠಾಣೆಯ ಸಿಬ್ಬಂದಿಗಳ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡಗಳು ದಿನಾಂಕ 27.09.2022 ರಂದು ಒಬ್ಬ ಆರೋಪಿಯನ್ನು ದಸ್ತಗಿರಿ ಮಾಡಿ, ವಿಚಾರಣೆ ಮಾಡಿದಾಗ ಆರೋಪಿಯು ತಾನು ಇತರೆ ತಲೆ ಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಜೊತೆಗೂಡಿ ಮೈಸೂರು ನಗರ ಹಾಗೂ ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ ಮನೆಕಳ್ಳತನ ಮತ್ತು ಸರಗಳ್ಳತನ ಮಾಡಿರುವುದಾಗಿ ಮಾಹಿತಿ ಹೊರಹಾಕಿದ್ದಾನೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಅಶೋಕಪುರಂ ಪೊಲೀಸ್ ಠಾಣೆಯ-01 ಸರಗಳ್ಳತನ ಮತ್ತು 1 ಮನೆಕಳ್ಳತನ, ಸರಸ್ವತಿಪುರಂ ಪೊಲೀಸ್ ಠಾಣೆಯ 02 ಸರಗಳ್ಳತನ ಮತ್ತು 01 ಮನೆ ಕಳ್ಳತನ, ಅಲನಹಳ್ಳಿ ಪೊಲೀಸ್ ಠಾಣೆಯ 01 ಮನೆ ಕಳ್ಳತನ, ಮೇಟಗಳ್ಳಿ ಪೊಲೀಸ್ ಠಾಣೆಯ 01 ಸರಗಳ್ಳತನ ಪ್ರಕರಣಗಳು ಮತ್ತು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ 01 ಮನೆ ಕಳ್ಳತನ, ಪಾಂಡವಪುರ ಟೌನ್‌ ಪೊಲೀಸ್ ಠಾಣೆಯ 01 ಮನೆ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ.

ಈ ಪತ್ತೆ ಕಾರ್ಯವನ್ನು ಡಿಸಿಪಿ ಗೀತ ಎಂ.ಎಸ್ ಅವರ ಮಾರ್ಗದರ್ಶನದಲ್ಲಿ ಕೃಷ್ಣರಾಜ ವಿಭಾಗದ ಸಹಾಯಕ ಪೊಲೀಸ್. ಆಯುಕ್ತ ಎಸ್‌.ಇ. ಗಂಗಾಧರಸ್ವಾಮಿ ಅವರ ನೇತೃತ್ವದಲ್ಲಿ ಮಾಡಲಾಗಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆ ಮತ್ತು ಅಶೋಕ ಪುರಂ ಠಾಣೆಯ ಪ್ರಭಾರ ಪೊಲೀಸ್ ಇನ್ಸ್‌ಪೆಕ್ಟರ್ ರವೀಂದ್ರ.ಪಿ.ಎಂ. ಸಬ್‌ ಇನ್ಸ್‌ ಪೆಕ್ಟರ್  ಸ್ಮಿತಾ.ಎಂ.ಕೆ ಹಾಗೂ ಸಿಬ್ಬಂದಿಗಳಾದ ರಾಜು. ಪಿ.ಜೆ, ನಾರಾಯಣಶೆಟ್ಟಿ, ಲೋಕೇಶ, ಹೆಚ್.ಜೆ. ಗಿರೀಶ್‌, ಮಹದೇವಯ್ಯ, ಬಸವರಾಜ ಮುನ್ಯಾಳ್‌, ಮಹೇಶ, ಹಾಗೂ ಕೃಷ್ಣರಾಜ ವಿಭಾಗದ ಎ.ಸಿ.ಪಿ ಸ್ಟ್ಯಾಡ್ ಸಿಬ್ಬಂದಿಗಳಾದ ಮೋಹನ್‌ ಕುಮಾರ್, ಸಾಗರ್, ಸುರೇಶ್  ಹರೀಶ, ಮೇಘಾನಾಯಕ್, ವೆಂಕಟೇಶ್, ಶ್ರೀನಿವಾಸ್, ಸೋಮಶೇಖರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Key words: mysore- thief-arrest-gold jewelry-siege