ನಾಳೆಯಿಂದ ಮೈಸೂರಿನ ಚಲನಚಿತ್ರ ಮಂದಿರಗಳು ಬಂದ್..!

ಮೈಸೂರು,ಜನವರಿ,20,2022(www.justkannada.in):  ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣಗಳನ್ನ ತಡೆಯಲು ಸರ್ಕಾರ ವೀಕೆಂಡ್ ಕರ್ಫ್ಯೂ ಹಾಗೂ 50-50 ನಿಯಮ ಜಾರಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಚಿತ್ರಮಂದಿರಗಳ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದು, ನಾಳೆಯಿಂದ ಚಲನಚಿತ್ರ ಮಂದಿರಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.

ರಾಜ್ಯ ಸರ್ಕಾರದ ಕಠಿಣ ನಿಯಮಗಳ ಜೊತೆ ಉದ್ಯಮ ನಡೆಸಲು ಚಿತ್ರಮಂದಿರದ ಮಾಲೀಕರು ಹಿಂದೇಟು ಹಾಕುತಿದ್ದು, ಹೀಗಾಗಿ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ತೆಗೆಯುವವರೆಗೂ ಚಿತ್ರಮಂದಿರಗಳನ್ನ ಬಂದ್ ಮಾಡಲು ಚಿತ್ರಮಂದಿರ ಮಾಲೀಕರ ಸಂಘ ನಿರ್ಧಾರ ಮಾಡಿದೆ.

back-start - Mysore- theatres- hesitate
ಕೃಪೆ-internet

ಬಹುತೇಕ ವೀಕೆಂಡ್ ನಲ್ಲೇ ಶೇ.60ರಷ್ಟು ವ್ಯಾಪಾರ ವಹಿವಾಟು ನಡೆಯುತ್ತೆ. ಆದರೆ ವೀಕೆಂಡ್ ಕರ್ಫ್ಯೂ ನಿಂದಾಗಿ ಶನಿವಾರ, ಭಾನುವಾರ ಚಿತ್ರಮಂದಿರ ತೆಗೆಯುವಂತಿಲ್ಲ. ಅಲ್ಲದೆ ನೈಟ್ ಕರ್ಫ್ಯೂ ನಿಂದ ರಾತ್ರಿ ಶೋ ಗೂ ಜನರಿಲ್ಲದ ಪರಿಸ್ಥಿತಿ ಇದೆ. 50-50ನಿಯಮದಲ್ಲಿ ಚಿತ್ರಮಂದಿರ ನಡೆಸಲು ಆಗ್ತಿಲ್ಲ. ಹಾಗಾಗಿ ಕರ್ಫ್ಯೂ ತೆಗೆಯುವ ವರೆಗೂ ಚಿತ್ರಮಂದಿರ ಬಂದ್ ಗೆ ನಿರ್ಧಾರ ಮಾಡಲಾಗಿದೆ ಎಂದು  ಚಿತ್ರಮಂದಿರ ಮಾಲೀಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಾರಾಂ ಮಾಹಿತಿ ನೀಡಿದ್ದಾರೆ.

Key words: Mysore -theaters –bandh- tomorrow