ಮೈಸೂರು: ದೇವಸ್ಥಾನದ ಬಾಗಿಲು ಮುರಿದು ಹುಂಡಿ ದೋಚಿದ ಖದೀಮರು…

ಮೈಸೂರು,ಮೇ,9,2019(www.justkannada.in): ದೇವಸ್ಥಾನದ ಬಾಗಿಲು ಮುರಿದು  ದರೋಡೆಕೋರರು ಹುಂಡಿ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಟಿ.ಕೆ.ಬಡಾವಣೆ 4 ನೇ ಹಂತದಲ್ಲಿ ಈ ಘಟನೆ ನಡೆದಿದೆ.  ಶ್ರೀಮಹಾಗಣ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದುರ್ಗಾದೇವಿ ದೇವಸ್ಥಾನದಲ್ಲಿ ಹುಂಡಿ ಕಳ್ಳತನವಾಗಿದೆ.  ಕಬ್ಬಿಣದ ರಾಡ್ ನಿಂದ ಬಾಗಿಲ ಬೀಗ ಹೊಡೆದು ತಡರಾತ್ರಿ ಒಳ ನುಗ್ಗಿದ ಖದೀಮರು ದೇವಸ್ಥಾನದ ಎರಡು ಹುಂಡಿಗಳಲ್ಲಿದ್ದ 30 ಸಾವಿರಕ್ಕೂ ಹೆಚ್ಚು ನಗದು ದೋಚಿ ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಸರಸ್ಪತಿಪುರಂ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಸ್ಥಾನಕ್ಕೆ ಕಳ್ಳರ ಎಂಟ್ರಿ ಹಿನ್ನಲೆ, ಅರ್ಚಕರು ದೇವಸ್ಥಾನ ಶುಚಿಗೊಳಿಸಿದರು.

Key words: Mysore -temple –robbed-thief