ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆ ಅಂದರ್…

ಮೈಸೂರು,ಅಕ್ಟೋಬರ್,24,2020(www.justkannada.in): ಟಿ.ನರಸೀಪುರ ಅಬಕಾರಿ ಇಲಾಖೆಯ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯನ್ನ ಬಂಧಿಸಿದ್ದಾರೆ.jk-logo-justkannada-logo

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದ ಮಹಿಳೆ ಲಕ್ಷ್ಮಮ್ಮ(42) ಬಂಧಿತ ಆರೋಪಿ. ಮಹಿಳೆ ಲಕ್ಷ್ಮಮ್ಮ  ಗಾಂಜಾ ಮಾರಾಟ ಮಾಡಲು ಯತ್ನಿಸಿದ್ಧ ಬಗ್ಗೆ ಖಚಿತ ಮಾಹಿತಿ  ಪಡೆದು ದಾಳಿ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಆರೋಪಿ ಲಕ್ಷ್ಮಮ್ಮ ಬಂಧಿಸಿದ್ದಾರೆ.

ಮೈಸೂರು ಅಬಕಾರಿ ಜಂಟಿ ಆಯುಕ್ತರು ಮತ್ತು ಮೈಸೂರು ಅಬಕಾರಿ ಉಪ ಆಯುಕ್ತರ  ನಿರ್ದೇಶನದಲ್ಲಿ ದಾಳಿ ನಡೆಸಲಾಗಿದ್ದು.  ಮಾರಾಟ ಮಾಡಲು ಶೇಖರಿಸಲಾಗಿದ್ದ  1 ಕೆಜಿ 250 ಗ್ರಾಂ ಗಾಂಜಾ ಮತ್ತು ಬೈಕ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: mysore- t.narsipur- Woman- selling –marijuana-arrest