ಸುತ್ತೂರು ಸೇತುವೆ  ಮುಳುಗಡೆ:  ರಸ್ತೆ ಸಂಪರ್ಕ ತಾತ್ಕಾಲಿಕ ಬಂದ್…

0
209

ಮೈಸೂರು,ಆ,7,2020(www.justkannada.in):  ಕೇರಳದ ವೈನಾಡು ಭಾಗದಲ್ಲಿ  ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಕಬಿನಿ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಹೊರ ಬಿಡಲಾಗಿದ್ದು ಇದರಿಂದಾಗಿ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿರುವ ಸೇತುವೆ ಮುಳುಗಡೆಯಾಗಿದೆ.mysore-suttur-bridge-sink-road-temporary-bandh

ಸುತ್ತೂರು ಸೇತುವೆ  ಮುಳುಗಡೆ ಹಿನ್ನೆಲೆ ರಸ್ತೆ ಸಂಪರ್ಕವನ್ನ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಕಬಿನಿ  ಜಲಾಶಯದಿಂದ ಹೆಚ್ಚು ನೀರು ಬಿಟ್ಟ ಪರಿಣಾಮ  ಸುತ್ತೂರು ಸೇತುವ ಮುಳುಗಡೆಯಾಗಿದ್ದು, ರಸ್ತೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.mysore-suttur-bridge-sink-road-temporary-bandh

ಇನ್ನು ಸೇತುವೆ ಬಳಿ ಜನರ ಓಡಾಟಕ್ಕೂ ಬ್ರೇಕ್ ಹಾಕಲಾಗಿದ್ದು, ಪೋಲಿಸರನ್ನ ನಿಯೋಜಿಸಿ ಬಂದೋಬಸ್ತ್ ಮಾಡಲಾಗಿದೆ. ಈ ಹಿಂದೆಯೂ ಪ್ರವಾಹ ಬಂದಾಗ ಸುತ್ತೂರು ಸೇತುವೆ ಮುಳುಗಡೆಯಾಗಿತ್ತು. ಆ ವೇಳೆ ಸುತ್ತೂರು ಶ್ರೀಗಳಿಂದ ಪೊಜೆ ಕೂಡ ನೇರವೇರಿತ್ತು.

Key words: mysore- suttur- Bridge- sink.-Road -Temporary Bandh