ಮೈಸೂರು,ಸೆಪ್ಟಂಬರ್,3,2025 (www.justkannada.in): ರೇಷ್ಮೆ ಕೃಷಿಯ ತಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿ ಎಂದು ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.ಪಿ.ದೀಪ ಕರೆ ನೀಡಿದರು.
ಇಂದಿನಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂಧಿಸಿದ ಅಂತರಾಷ್ಟ್ರೀಯ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿರುವ ತರಬೇತಿ ಕಾರ್ಯಕ್ರಮವನ್ನ ಬೆಂಗಳೂರಿನ ಕೇಂದ್ರ ರೇಷ್ಮೆ ಮಂಡಳಿಯ ನಿರ್ದೇಶಕರಾದ ಡಾ.ಎಸ್. ಮಂಥಿರಾ ಮೂರ್ತಿ ಉದ್ಘಾಟಿಸಿ ಶಿಬಿರದ ಉದ್ದೇಶಗಳು ಹಾಗೂ ರೇಷ್ಮೆ ಮತ್ತು ರೇಷ್ಮೆ ಉದ್ಯಮದ ಮಹತ್ವದ ಬಗ್ಗೆ ತರಬೇತಿ ಅಭ್ಯರ್ಥಿಗಳಿಗೆ ತಿಳುವಳಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಕೋರಿ ಮಾತನಾಡಿದ ಮೈಸೂರಿನ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕರಾದ ಡಾ.ಪಿ.ದೀಪ ಅವರು, ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಸಂಸ್ಥೆಯ ಪ್ರಮುಖವಾದ ಪಾತ್ರದ ಬಗ್ಗೆ ಹೇಳಿದರು. ಸಂಸ್ಥೆಯು ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ರೇಷ್ಮೆ ಕೃಷಿಯ ತಾಂತ್ರಿಕ ಬೆಂಬಲವನ್ನು ಸಹ ಒದಗಿಸುತ್ತಿದೆ. ಸಂಸ್ಥೆಯ ಆವಿಷ್ಕಾರಗಳು ರೇಷ್ಮೆ ಕೃಷಿಯ ಉತ್ಪಾದಕತೆ, ಲಾಭದಾಯಕತೆ, ಸುಸ್ಥಿರತೆಯನ್ನು ಸುಧಾರಿಸಲು ಬಹಳ ಉಪಯುಕ್ತವಾಗಿವೆ. ಈ ತರಬೇತಿಯು ಇಂದಿನಿಂದ ಸೆಪ್ಟೆಂಬರ್ 30 ರವರೆಗೆ ನಡೆಯುತ್ತದೆ. ಈ ತರಬೇತಿಯಲ್ಲಿ ತಾವು ರೇಷ್ಮೆ ಕೃಷಿಯ ತಾಂತ್ರಜ್ಞಾನಗಳನ್ನು ಕಲಿತು ತಮ್ಮ ದೇಶದಲ್ಲಿ ಉಪಯೋಗಿಸಿಬೇಕೆಂದರು.
ಸಮಶೀತೋಷ್ಣದಲ್ಲಿ ರೇಷ್ಮೆ ಕೃಷಿ ಅಭಿವೃದ್ಧಿಯಲ್ಲಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದೆ. ಈ ಸಂಸ್ಥೆಯು ವಿವಿಧ ರೀತಿಯ ರೇಷ್ಮೆ ಕೃಷಿಗೆ ಸಂಬಂಧಿಸಿದ ತಂತ್ರಜ್ಞಾನಗಳನ್ನು ಮತ್ತು ಉತ್ಪನ್ನಗಳನ್ನು ಅವಿಷ್ಕಾರ ಮಾಡಿದೆ ಎಂದರು.
ಕೇಂದ್ರ ರೇಷ್ಮೆ ಮಂಡಳಿ ಡನಿರ್ದೇಶಕರು (ತಾಂತ್ರಿಕ) .ಎಸ್. ಮಂಥಿರಾ ಮೂರ್ತಿ, ಮಾತನಾಡಿ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರು ರೇಷ್ಮೆ ಕೃಷಿಗೆ ಸಂಬಂಧಿಸಿದಂತೆ ಹಲವಾರು ತಾಂತ್ರಿಕತೆಗಳನ್ನು ಅವಿಷ್ಕಾರಿಸಿದೆ. ಈ ತರಬೇತಿ ಶಿಬಿರದಲ್ಲಿ ತಾಂತ್ರಿಕತೆಗಳನ್ನು ವಿಜ್ಞಾನಿಗಳು ತರಬೇತಿ ಅವಧಿಯಲ್ಲಿ ಪ್ರಯೋಗಿಕವಾಗಿ ವಿವರಿಸುತ್ತಾರೆ ಅದನ್ನು ತಾವು ಅರಿತು ತಮ್ಮ ದೇಶಗಳಿಗೆ ಹೋದ ಮೇಲೆ ರೇಷ್ಮೆ ಕೃಷಿಯಲ್ಲಿ ಆಳವಡಿಸಿಕೊಳ್ಳಬೇಕು ಎಂದರು. 2014 ರಿಂದ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಮೈಸೂರಿನಲ್ಲಿ 7ನೇ ತಂಡದ ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮವಾಗಿದೆ ಹಾಗು ಇಲ್ಲಿಯವರೆಗೆ 22 ದೇಶಗಳಿಂದ 132 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ. ಈ ತಂಡದಲ್ಲಿ 8 ದೇಶಗಳ 30 ಜನರಿಗೆ ತರಬೇತಿ ನೀಡಲಾಗುವುದೆಂದರು.
ಈ ಶಿಬಿರದಲ್ಲಿ, ಈಜಿಪ್ಟ್, ಇಥಿಯೋಪಿಯಾ, ಘಾನಾ, ಫಿಲಿಪೈನ್ಸ್, ಕ್ಯೂಬಾ, ಟಾಂಜಾನಿಯಾ. ಉಗಾಂಡಾ, ಥೈಲ್ಯಾಂಡ್ ದೇಶಗಳಿಂದ ಸುಮಾರು 30 ಅಭ್ಯರ್ಥಿಗಳು ಭಾಗವಹಿಸಿದ್ದರು.
ಪದ್ಮನಾವ ನಾಯಕ್, ಸಹಾಯಕ ಕಾರ್ಯದರ್ಶಿ, ಐಎಸ್‌ಸಿ, ಬೆಂಗಳೂರು ಇವರು ರೇಷ್ಮೆ ಮತ್ತು ರೇಷ್ಮೆ ಉದ್ಯಮಕ್ಕೆ ಸಂಬಂದಿಸಿದ ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಡಾ.ಎಲ್.ಕುಸುಮ. ವಿಜ್ಞಾನಿ ಮತ್ತು ಡಾ.ಎಂ.ಎಸ್.ರಂಜನಿ. ಇವರು ಕಾರ್ಯಕ್ರಮದ ನೀಡಿದರು. ನಿರೂಪಣೆ ಮಾಡಿದರು. -ಡಾ. ಕೆ.ಎನ್.ಮಧುಸೂದನ್, ವಿಜ್ಞಾನಿ ಡಿ. ಮತ್ತು ಮುಖ್ಯಸ್ಥರು, ತರಬೇತಿ ವಿಭಾಗ. ಸಿ.ಎಸ್.ಆರ್.ಟಿ.ಐ. ಮೈಸೂರು ಇವರು ವಂದನಾರ್ಪಣೆ ಮಾಡಿದರು. ಸಂಸ್ಥೆಯ ವಿಜ್ಞಾನಿಗಳು. ಅಧಿಕಾರಿಗಳು, ಸಿಬಂದ್ಧಿ, ಯೋಜನಾ ಸಹಾಯಕರು ಭಾಗವಹಿಸುವರು.
Key words: Mysore, Learn, technologies, sericulture, Dr. P. Deepa